ಕೇಂದ್ರ ಬಜೆಟ್‍ನ ಜನವಿರೋಧಿ ನಿರ್ದೇಶನ ಕೂಡಲೇ ಹಿಂಪಡೆಯಬೇಕು : ಮಂಜೇಶ್ವರ ವಲಯ ಸಿಪಿಐ ಸಮಿತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನೆ

ಮಂಜೇಶ್ವರ: ಅದಾನಿ ಗ್ರೂಪಿನ ಕಾನೂನು ಬಾಹಿರವಾದ ಚಟುವಟಿಕೆಗಳನ್ನು ಸಂಯುಕ್ತ ಪಾರ್ಲಿಮೆಂಟರಿ ಸಮಿತಿ ತನಿಖೆ ನಡೆಸಬೇಕು, ಕೇಂದ್ರ ಸರ್ಕಾರದ ಬಜೆಟಿನ ಜನ ವಿರೋಧಿ ನಿರ್ದೇಶನಗಳನ್ನು ಕೂಡಲೇ ಹಿಂಪಡೆಯಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐ ಮಂಜೇಶ್ವರ ವಲಯ ಸಮಿತಿಯ ವತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಅಜಿತ್ ಎಂಸಿ ಲಾಲ್ ಬಾಗ್ ರವರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು ಸಿಪಿಐ ಜಿಲ್ಲಾ ಕಾರ್ಯಕಾರಿ ಸದಸ್ಯ ಬಿವಿ ರಾಜನ್ ಉದ್ಘಾಟಿಸಿದರು.ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ್ ಬಳ್ಳಂ ಕುಡೇಲ್, ಮೋಟಾರ್ ಯೂನಿಯನ್ ಜಿಲ್ಲಾಧ್ಯಕ್ಷ ಮುಸ್ತಫ ಕಡಂಬಾರ್ , ಸಿಪಿಐ ಮಂಜೇಶ್ವರ ಮಂಡಲ ಸಮಿತಿ ಸದಸ್ಯರಾದ ಶ್ರೀಧರ್ ಮಾಡ, ಹರೀಶ್ ಕೆ ಆರ್ ಗಂಗಾಧರ್ ಕೊಡ್ಡೆ ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.
