ಫೆ.17ರಂದು ಮಗಳು ಕನ್ನಡ ಚಲನಚಿತ್ರ ತೆರೆಗೆ
ಮಗಳು, ಇದು ಗ್ರಾಮೀಣ ಪ್ರತಿಭೆಗಳಿಂದಲೇ ಮೂಡಿಬಂದ ಕನ್ನಡ ಚಲನಚಿತ್ರ. ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನೇ ಇಟ್ಟುಕೊಂಡು ಪೋಣಿಸಲಾದ ಮಗಳು ಎಂಬ ಕನ್ನಡ ಚಲನಚಿತ್ರಕ್ಕೆ ಚಿತ್ರಮಂಡಳಿಯಿಂದ ಅತ್ಯುತ್ತಮ ಚಲನಚಿತ್ರವೆಂದು ಯು ಸರ್ಟಿಫಿಕೆಟ್ ಲಭಿಸಿದೆ. ಫೆ.17ರಂದು ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ತೋಮಸ್ ಎಂ.ಎಂ. ಹೇಳಿದರು.
ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಗಾಡ್ ಗಿಫ್ಟ್ ಫ್ಯಾಮಿಲಿ ಫಿಲಂ ಬ್ಯಾನರ್‍ನಡಿ ನಿರ್ಮಾಣ ಆಗಿರುವ ಚಿತ್ರವಿದು. ಸಮಾಜಕ್ಕೆ ಒಂದು ಬಾಂಧವ್ಯದ ಸಂದೇಶ ಸಾರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಪೋಣಿಸಲಾದ ಚಿತ್ರವೇ ಮಗಳು. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯುವ ಪ್ರತಿಭೆಗಳನ್ನೇ ಇಟ್ಟುಕೊಂಡು ನಿರ್ಮಿಸಲಾದ ಚಿತ್ರ ಇದೀಗ ಎಲ್ಲರ ಗಮನ ಸೆಳೆದಿದೆ. ಫ್ಯಾಮಿಲಿ ಜತೆ ಒಟ್ಟಿಗೆ ಕುಳಿತುಕೊಂಡು ನೋಡಬಹುದಾದ ಸಿನಿಮಾ ಎಂದು ಹೇಳಿದರು.
ಇನ್ನು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಖ್ಯಾತ ತುಳುಚಲನಚಿತ್ರ ನಟ ನವೀನ್ ಡಿ ಪಡೀಲ್ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪಕ್ಕಾ ಹಳ್ಳಿ ಕಲಾವಿದರು ಎನ್ನುವುದೇ ವಿಶೇಷ. ಚಿತ್ರದ ರಾಮು ಪಾತ್ರದಲ್ಲಿ ನಿರ್ದೇಶಕ ತೋಮಸ್ ಎಂ.ಎಂ. ಮಗಳ ಪಾತ್ರದಲ್ಲಿ ಭಾರ್ಗವಿ ಆರ್. ಶೇಟ್, ತಾಯಿ ಪಾತ್ರದಲ್ಲಿ ಸವಿತಾ ಪ್ಲಾವ್ಯಾ ನಟಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಸುಂದರ ಹೆಗ್ಡೆ ಬಿ.ಇ, ಪಿ ದರಣೇಂದ್ರ ಕುಮಾರ್, ಶ್ರವಣ ಕುಮಾರಿ, ಅರ್ಪಿತಾ ಕೋಟ್ಯಾನ್, ಶ್ರೀಮಾ ಉಜಿರೆ, ಶರಣ್ ಶೆಟ್ಟಿ ವೇಣೂರು, ಆನಂದ ಗಾಂಧಿನಗರ ಬಿಜಿಲ್ ಮ್ಯಾಥ್ಯೂ, ತನಿಷಾ ಕಾರ್ಕಳ ಮೊದಲಾದವರು ನಟಿಸಿದ್ದಾರೆ.
ಚಿತ್ರದ ಸಹನಿರ್ಮಾಪಕರಾಗಿ ಬಿಜಿಲ್ ಮ್ಯಾಥ್ಯೂ ಲತಾ ಮಂಗಳೂರು ಹಾಗೂ ಅರುಣ್ ಬೆಳ್ತಂಗಡಿ ಸಹಕರಿಸಿದ್ದರೆ ಸಹ ನಿರ್ದೇಶಕರಾಗಿ ಮಹಾಲಕ್ಷ್ಮೀ ಪೆರಾಡಿ ಮತ್ತು ಸಂದೇಶ ಬಡಕೋಡಿ ಕೆಲಸ ಮಾಡಿದ್ದಾರೆ, ಛಾಯಾಗ್ರಹಣ ಶಶಿಧರ ದೇವಾಡಿಗ ಉಡುಪಿ, ಸಂಗೀತಾ ಗುರುರಾಜ್ ಎಂ.ಬಿ. ನೃತ್ಯ ಸಂಯೋಜನೆ ಶ್ರವಣ ಕುಮಾರಿ ಮಾಡಿದ್ದರೆ, ಸಂಕಲನ ಹರೀಶ್ ಕೊಡ್ಪಾಡಿ ಮತ್ತು ಸುಶಾಂತ್ ಪೂಜಾರಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಮನಸೆಳೆಯುವ ಮೂರು ಹಾಡುಗಳಿದ್ದು, ತೋಮಸ್ ಎಂ.ಎಂ. ಮತ್ತು ಸೀತಾ ಆರ್ ಶೇಟ್ ರಚಿಸಿದ್ದಾರೆ. ಸಂಗೀತಾ ಬಾಲಚಂದ್ರ ಮತ್ತು ಗುರುರಾಜ್ ಎಂ.ಬಿ. ನೃತ್ಯ ಸಂಯೋಜನೆ ಶ್ರವಣ ಕುಮಾರಿ ಮಾಡಿದ್ದರೆ ಸಂಕಲನ ಹರೀಶ್ ಕೊಡ್ಪಾಡಿ ಮತ್ತು ಸುಶಾಂತ್ ಪೂಜಾರಿ ನಿರ್ವಹಿಸಿದ್ದಾರೆ.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಪಿ. ಧರಣೇಂದ್ರ ಕುಮಾರ್, ಶ್ರವಣ ಕುಮಾರಿ ಉಪಸ್ಥಿತರಿದ್ದರು.