ಜೈನ್ ವಿವಿಯ ಪ್ರಕರಣ : ಮಂಗಳೂರು ವಿವಿಯಲ್ಲಿ ಎಪಿಎಸ್ಎ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಜೈನ್ ವಿವಿಯ ಪ್ರಕರಣವನ್ನು ಖಂಡಿಸಿ ನಡೆಸಿರುವ ಶಾಂತಿಯುತ ಪ್ರತಿಭಟನೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಬೋಧಕ ಹಾಗೂ ಬೋಧಕೇತರ ವರ್ಗದವರು ಬಾಗವಹಿಸಿದರು. ಈ ಶಾಂತಿಯುತ ಪ್ರತಿಭಟನೆಯಲ್ಲಿ ಅಂಬೇಡ್ಕರ್, ಫುಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೋಹನ್ ಕುಮಾರ್, ಪದಾಧಿಕಾರಿಗಳಾದ ಅವಿನಾಶ್ ಕಾಂಬ್ಳೆ, ವಿಜಯ್ ಕುಮಾರ್, ಗೋವಿಂದ್ ಹಾಗೂ ಸುರೇಶ್ ಉಪಸ್ಥಿತರಿರುತ್ತಾರೆ.
