ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಗುಜರಾತ್ನ ಅಹಮದಾಬಾದ್ನಲ್ಲಿ ಶುಕ್ರವಾರ ಬೆಳಗಿನ ಜಾವ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು. ಗುಜರಾತ್ನ ಅಹಮದಾಬಾದ್ನಲ್ಲಿ ಶುಕ್ರವಾರ ನಿಧನರಾದರು. ಅವರಿಗೆ 100 ವರ್ಷ ವಯಸ್ಸಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ನಗರದ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ,
ಗೃಹ ಸಚಿವರು ಅಡಿಕೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು. ಅದು ಅಗತ್ಯವಿಲ್ಲ ಎಂಬ ರೀತಿ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಅಡಿಕೆ ಬೆಳೆಗಾರರಿಗೆ ಮಾಡಿದಂತಹ ಅವಮಾನವಾಗಿದೆ ಎಂದು ಮಾಜಿ ಶಾಸಕ ಶಕುಂತಳಾ ಶೆಟ್ಟಿ ಹೇಳಿದರು.ಅವರು ಪುತ್ತೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಡಿಕೆ ಬೆಳೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು ಎನ್ನುವ ಬದಲು ಅವರು ಅದಕ್ಕೆ ಯಾವ ರೀತಿ ಪರಿಹಾರ ನೀಡಬಹುದು ಎಂಬುವುದನ್ನು ಯೋಚಿಸಬೇಕಾಗಿದೆ.
ಪುತ್ತೂರಿನಲ್ಲಿ ಇತ್ತೀಚೆಗೆ ಮಕ್ಕಳು ಸಾವನ್ನಪ್ಪುವ ವಿಚಾರಗಳು ಹೆಚ್ಚಾಗಿ ಕಾಣುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚಿನ ಗಮನಹರಿಸಿಬೇಕೆಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.ಅವರು ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಇದು ಪುತ್ತೂರಿನಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಸಂಭವಿಸುತ್ತಿದೆ. ಇದನ್ನು ಆರೋಗ್ಯ ಇಲಾಖೆ ಗಮನಹರಿಸಬೇಕು. ಯಾವ ಕಾರಣದಿಂದ ಈ ಕಾಯಿಲೆಗಳು ಬರುತ್ತಿದೆ. ಸಣ್ಣ ವಯಸ್ಸಿನವರಿಗೂ ಹೃದಯಾಘಾತ,
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರ ಕಾರು ಅಪಘಾತ ಪ್ರಾಣಪಾಯದಿಂದ ಪಾರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಅವರ ಖಾಸಗಿ ಒಡೆತನದ ಕಾರೊಂದು ಪುತ್ತೂರು ಬೈಪಾಸ್ ರಸ್ತೆ ನೂಜಿ ಎಂಬಲ್ಲಿ ಡಿ.29 ರಂದು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಡಾ.ದೀಪಕ್ ರೈ ದಂಪತಿ ಸಮೇತ ಮಂಗಳೂರು ಕಡೆಯಿಂದ ಕಾರಿನಲ್ಲಿ ಬರುತ್ತಿದ್ದ ವೇಳೆ ಬೈಪಾಸ್ ರಸ್ತೆಯ ನೂಜಿ ಎಂಬಲ್ಲಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೆ
ವಿಟ್ಲ: ಅಳಿಕೆ ಗ್ರಾಮದ ಕೋಟೆತ್ತಡ್ಕದಲ್ಲಿ ನಡೆಯುತ್ತಿರುವ ಕೆಂಪು ಕಲ್ಲು ಗಣಿಗಾರಿಕೆಯ ಸಂಪೂರ್ಣ ಸಕ್ರಮವಾಗಿದ್ದು, ಗಣಿಗಾರಿಕೆ ನಡೆಸುವ ಜಾಗ ಸಂಪೂರ್ಣ ವರ್ಗ ಜಮೀನಾಗಿದೆ. ಅದನ್ನು ಲೀಸ್ ಗೆ ಪಡೆದು ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದು ಕಲ್ಲು ತೆಗೆಯಲಾಗುತ್ತಿದೆ. ಈ ಭಾಗದಲ್ಲಿ ಪಾಂಡವರ ಕೋಟೆಯಿಲ್ಲ, ಪಾಂಡವರ ಒಲೆಯ ಕುರುಹು ಇದ್ದು ಆ ಸ್ಥಳವನ್ನು ಸಂರಕ್ಷಣೆ ಮಾಡಲಾಗಿದೆ ಎಂದು ಕೊಟೆತ್ತಡ್ಕ ಕೆಂಪು ಕಲ್ಲು ಕ್ವಾರಿ ಮಾಲೀಕ ರಂಜಿತ್ ಕುಮಾರ್ ಹೇಳಿದ್ದಾರೆ.
ಸುರತ್ಕಲ್ ಅಕ್ರಮ ಟೋಲ್ ಸುಂಕ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ವಿಲೀನ ಆದ್ಯಾದೇಶ ಶಾಶ್ವತವಾಗಿ ಹಿಂಪಡೆಯಲು ಆಗ್ರಹಿಸಿ ಸುರತ್ಕಲ್ ನಂತೂರು ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯಾಗಿ ಘೋಷಿಸಲು ಒತ್ತಾಯಿಸಿ ಸಾಮೂಹಿಕ ಜನಾಗ್ರಹ ಧರಣಿ ಬನ್ನಂಜೆಯಲ್ಲಿ ನಡೆಯಿತು. ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ
ಸುಳ್ಯ . ಸರಕಾರದ ಅರಣ್ಯ ಇಲಾಖೆ ಯಲ್ಲಿ ಇದ್ದುಕೊಂಡು ಭಜನೆ ಮತ್ತು ಬಜಕರ ಬಗ್ಗೆ ಹಿಂದೂ ದೇವರ ಬಗ್ಗೆ ನಿಂದನೆಯ ಪೋಸ್ಟುಗಳನ್ನು ತನ್ನ ಫೇಸ್ಬುಕ್ ನಲ್ಲಿ ಹರಿಯ ಬಿಟ್ಟು ಹಿಂದುಗಳ ಭಾವನೆಗೆ ದಕ್ಕೆ ತಂದಿರುವ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಪ್ರಕರಣ ದಾಖಲಾಗಿದ್ದರು ಕೂಡ ಬಂಧನ ಮಾಡದ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಇಂದು ಬೆಳ್ಳಾರೆ ಪೊಲೀಸ್ ಠಾಣಾ ಎದುರು ಬೃಹತ್ ಪ್ರತಿಭಟನೆ ನಡೆಸಿದರು ಮುಂದಿನ ದಿನದಲ್ಲಿ ಉಪ ವಲಯ ಅರಣ್ಯ
ಬಂಟ್ಚಾಳ: ತಾಲೂಕಿನ ವಾಮದಪದವು ವಲಯ ಬಂಟರ ಸಂಘದ ವತಿಯಿಂದ ಆಲದಪದವಿನ ನಿವೇಶನದಲ್ಲಿ ನಿರ್ಮಿಸಲು ಉದ್ಧೇಶಿಸಿರುವ “ಪದವು ಬಂಟರ ಭವನ” ದ ಶಿಲಾನ್ಯಾಸ ಸಮಾರಂಭವು ಜ.5ರಂದು ನಡೆಯಲಿದೆ ಎಂದು ಸಂಘದ ಗೌರವ ಸಲಹೆಗಾರ ಅಶೋಕ ಪಕ್ಕಳ ಶ್ರೀ ಸನ್ನಿಧಿಗುತ್ತು ತಿಳಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಲದಪದವಿನಲ್ಲಿರುವ 1.61 ಎಕ್ರೆ ನಿವೇಶನದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಬಂಟರ ಭವನ
ಮೂಡುಬಿದಿರೆ: ಸ್ಕೌಟ್ಸ್ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿ ಕಾರ್ಯಕ್ರಮದಿಂದ ಕಳೆದ ಏಳು ದಿನಗಳಿಂದ ಜನಜಂಗುಳಿಯಿಂದ ತುಂಬಿಕೊಂಡಿದ್ದ ವಿದ್ಯಾಗಿರಿ ಜನ ಸಂದಣಿ ಇಲ್ಲದೆ ಬಿಕೋ ಎನ್ನುತ್ತಿರುವ ದೃಶ್ಯ ಕಂಡು ಬಂತು. ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಹಾಕಲಾಗಿದ್ದ ವಿವಿಧ ಸ್ಟಾಲ್ ಗಳು, ಕೃಷಿ ಮೇಳದ ವೇದಿಕೆ, ಕೃಷಿಸಿರಿ, ಪ್ರದರ್ಶನಕ್ಕಿಟ್ಟಿದ್ದ ವಿವಿಧ ರೀತಿಯ ಬಣ್ಣ ಬಣ್ಣದ ಹೂವಿನ ಗಿಡಗಳು, ಆಹಾರಮೇಳ, ಕಲಾಮೇಳದ ವೇದಿಕೆಗಳಲ್ಲಿ ಮಂಗಳವಾರ ರಾತ್ರಿ
2023 ನೇ ಸಾಲಿನಲ್ಲಿ ದೆಹಲಿಯಲ್ಲಿ ನಡೆಯಲಿರುವ ಭಾರತ ಗಣರಾಜ್ಯೋತ್ಸವ ಫೆರೇಡ್ ನಲ್ಲಿ ಭಾಗವಹಿಸಲು ಪುತ್ತೂರಿನ ಡಾ| ವಜಿದಾಬಾನು ಆಯ್ಕೆ. ಎನ್ ಎಸ್ ಎಸ್ ವತಿಯಿಂದ ನಡೆದ ದಕ್ಷಿಣ ಪ್ರಾಂತೀಯ ಪ್ರೀ ಆರ್ ಡಿ ತರಬೇತಿ ಶಿಬಿರದಲ್ಲಿ ಕರ್ನಾಟಕದಿಂದ ಆಯ್ಕೆಗೊಂಡಿರುವ ಏಳು ಮಂದಿಯಲ್ಲಿ ಇವರು ಒಬ್ಬರಾಗಿದ್ದಾರೆ. ಇವರು ಪುತ್ತೂರು ಅಂಬಿಕಾ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು ಪುತ್ತೂರಿನ ಮೊಟ್ಟೆತ್ತಡ್ಕ ಇಸ್ಮಾಯಿಲ್ ಮತ್ತು ಸುಫಿಯಾ ಬಾನು ದಂಪತಿಗಳ



























