ಸುರತ್ಕಲ್-ನಂತೂರು ಟೋಲ್ ಮುಕ್ತ ರಸ್ತೆಯಾಗಿ ಘೋಷಿಸಲು ಒತ್ತಾಯ : ಬನ್ನಂಜೆಯಲ್ಲಿ ಸಾಮೂಹಿಕ ಜನಾಗ್ರಹ ಧರಣಿ

ಸುರತ್ಕಲ್ ಅಕ್ರಮ ಟೋಲ್ ಸುಂಕ ಹೆಜಮಾಡಿ ಟೋಲ್‍ಗೇಟ್‍ನಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ವಿಲೀನ ಆದ್ಯಾದೇಶ ಶಾಶ್ವತವಾಗಿ ಹಿಂಪಡೆಯಲು ಆಗ್ರಹಿಸಿ ಸುರತ್ಕಲ್ ನಂತೂರು ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯಾಗಿ ಘೋಷಿಸಲು ಒತ್ತಾಯಿಸಿ ಸಾಮೂಹಿಕ ಜನಾಗ್ರಹ ಧರಣಿ ಬನ್ನಂಜೆಯಲ್ಲಿ ನಡೆಯಿತು.

ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡರಾದ ಆಶ್ರಫ್ ಅವರು ಇಲ್ಲಿಯ ಜನರ ಹೋರಾಟಕ್ಕೆ ಜಯ ಸಿಗುವವರೆಗೆ ನಾವೆಲ್ಲರೂ ಟೋಲ್‍ಗೇಟ್ ವಿರುದ್ಧ ಹೋರಾಟದಲ್ಲಿ ಕೈಜೋಡಿಸುತ್ತೇವೆ ಎಂದರು.

ಇನ್ನು ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಮುನೀರ್ ಕಾಟಿಪಳ್ಳ ಸೇರಿದಂತೆ ಅನೇಕ ಮಂದಿ ಪಾಲ್ಗೊಂಡಿದ್ದರು.
