ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದವನ್ನು ಶಮನಗೊಳಿಸಲು ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ 14 ರಂದು ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ ಎಂದು ಎನ್‍ಸಿಪಿ ನಾಯಕ ಅಮೋಲ್ ಕೋಲ್ಹೆ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸಂಸದರ ನಿಯೋಗದೊಂದಿಗೆ ಶಾ ಅವರನ್ನು ಭೇಟಿ
ಮಂಗಳೂರಿನ ಕೊಟ್ಟಾರ ಚೌಕಿಯ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ವತಿಯಿಂದ ಶಾಲಾ ಮಕ್ಕಳೊಂದಿಗೆ ಸಂಚಾರ ಜಾಗೃತಿ ಕುರಿತು ರ್‍ಯಾಲಿಯನ್ನ ನಗರದ ಲಾಲ್‍ಭಾಗ್ ಜಂಕ್ಷನ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆ ನಿಯಮ ಉಲ್ಲಂಘನೆ, ಹೆಲ್ಮೆಟ್ ಧರಿಸದೇ ವಾಹನ ಚಲಾವಣೆ ಮಾಡುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ವತಿಯಿಂದ ಶಾಲಾ ಮಕ್ಕಳಿಂದ ರ್ಯಾಲಿ ನಡೆಸಲಾಯ್ತು. ಶ್ರೀ ಚೈತನ್ಯ
ಮೂಡುಬಿದಿರೆ: ಹ್ಯೂಸ್ಟನ್ ಮೂಲದ ಮ್ಯಾನುಫ್ಯಾಕ್ಟರಿಂಗ್ ಹಾಗೂ ಲಾಜಿಸ್ಟಿಕ್ಸ್ ಸಂಬಂಧಿತ ಸೈಲಿಯ ‘ಇಂಕ್’ ಅಂತರಾಷ್ಟ್ರೀಯ ಕಂಪೆನಿಯ ಸಹಭಾಗಿತ್ವದಲ್ಲಿ ವಿಮಾನ ತಂತ್ರಜ್ಞಾನ ಆಧಾರಿತ ‘ಸ್ಟ್ರೆಲಿಯಂ ಟೆಕ್ನಾಲಜಿ ಆಂಡ್ ಸೆಂಟರ್‍ನ್ನು ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಅವರು ನೂತನ ಲ್ಯಾಬ್‍ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸ್ಟೆಲಿಯಂ
ತೆರಿಗೆ ಕಟ್ಟಲು ಒತ್ತಡ ಹೇರಿದ್ದಾರೆ ಎಂಬ ಕಾರಣಕ್ಕೆ ನಂದಿಕೂರು ಕೈಗಾರಿಕಾ ವಲಯದಲ್ಲಿ ಕಾರ್ಯಚರಿಸುತ್ತಿರುವ ಕಂಪನಿಯೊಂದರ ಮುಖ್ಯಸ್ಥರು ಪಲಿಮಾರು ಗ್ರಾ.ಪಂ. ಅಧ್ಯಕ್ಷರ ಛೇಂಬರ್ ಗೆ ಹೋಗಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ ಗ್ರಾ.ಪಂ. ಆಢಳಿತ ಸಮಿತಿ ಸದಸ್ಯರು ಅಧ್ಯಕ್ಷರೊಂದಿಗೆ ತೆರಳಿ ಕಂಪನಿ ಪ್ರಮುಖರಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಸೃಷ್ಠಿ ಹೆಸರಿನ ಕಚ್ಚಾವಸ್ತುಗಳ ಮರು ಬಳಕೆ ಕಂಪನಿಯ ಪ್ರಮುಖರೇ ಆರೋಪಿಗಳು, ಅದಲ್ಲದೆ ಇದೇ ಕಂಪನಿಯ ವಠಾರದಲ್ಲಿ
ಬಂಟ್ವಾಳ: ಮತದಾರ ಪಟ್ಟಿ ಪರಿಷ್ಕರಣೆಯ ನೆಪದಲ್ಲಿ ಮತದಾರರ ಹೆಸರನ್ನು ಕಳಚುವ ಬಗ್ಗೆ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಗುರುವಾರ ಬಂಟ್ವಾಳ ತಹಸೀಲ್ದಾರರಿಗೆ ದೂರು ಸಲ್ಲಿಸಿತು. ಬಳಿಕ ರಮನಾಥ ರೈ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣಾ ಆಯೋಗದ ಆದೇಶದಂತೆ ಸ್ಥಳೀಯ ಮಟ್ಟದ ಮತಗಟ್ಟೆಯ ಬಿಎಲ್‍ಓಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ವಿಶ್ವಾಸವಿದೆ. ಆದರೆ ಕಳೆದ
ಬಂಟ್ವಾಳ: ಯುವ ವಕೀಲ ಕುಲದೀಪ್ ಶೆಟ್ಟಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ದೌಜ್ಯನ್ಯ ನಡೆಸಿದ ಪುಂಜಾಲಕಟ್ಟೆ ಪೆÇಲೀಸರ ಅಮಾನತಿಗೆ ಆಗ್ರಹಿಸಿ ಜಿಲ್ಲಾಯದ್ಯಂತ ವಕೀಲರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರೆ ಯುವ ವಕೀಲನ ಉಪಟಳದಿಂದ ತುಂಬಾ ತೊಂದರೆಯಾಗಿದ್ದು ಮಾನಸಿಕವಾಗಿ ಕುಗ್ಗಿ ಹೋಗಿರುವುದಾಗಿ ದೂರುದಾರ ವಸಂತಗೌಡ ಅವರ ಪತ್ನಿ ಭವಾನಿ ಅಳಲು ತೋಡಿಕೊಂಡಿದ್ದಾರೆ. ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕಳೆದ ಡಿ. 2ರಂದು ತಾನು ತನ್ನ ಪತಿ ಹಾಗೂ ಕೆಲಸದಾಳು
ಉಜಿರೆ ಡಿಸೆಂಬರ್ ೫: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ನಾಯಕತ್ವವನ್ನುವಹಿಸಿಕೊಂಡು ಯಶಸ್ವಿ ಪ್ರಯೋಗಗಳನ್ನು ನಡೆಸಿದ್ದರು ಡಾ. ಬಿಯಶೋವರ್ಮ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್.ಸತೀಶ್ಚಂದ್ರ ಹೇಳಿದರು.ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಮಾಜಿ ಕಾರ್ಯದರ್ಶಿ ದಿ. ಡಾ. ಬಿ. ಯಶೋವರ್ಮಅವರ ೬೮ನೇ ಹುಟ್ಟು ಹಬ್ಬದ ಅಂಗವಾಗಿ ಎಸ್.ಡಿ.ಎಂ ಕಲಾಕೇಂದ್ರ ಆಯೋಜಿಸಿದ್ದ‘ಯಶೋಸ್ವಪ್ನ’ ಕಾರ್ಯಕ್ರಮದಲ್ಲಿ ಅವರ ತತ್ವ ಮತ್ತುಕಾರ್ಯಗಳನ್ನು ಮೆಲುಕು
ಇಂದಿನ ಯುವಶಕ್ತಿಯು ಕಾರ್ಪೊರೇಟ್ ಜಗತ್ತಿನಲ್ಲಿ ಮೆಲ್ಗೈಯನ್ನು ಸಾದಿಸುತ್ತಿದೆ. ಯುವಜನತೆಯು ಏನನ್ನಾದರೂ ಸಾಧಿಸುತ್ತದೆ ಅಂತಹ ಸಾಮರ್ಥ್ಯ, ಬುದ್ಧಿಶಕ್ತಿ ಯುವಕರಿಗಿದೆ ಎಂದು ಉಜಿರೆಯ ಎಸ್.ಡಿ.ಎಂ ಸೊಸೈಟಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ವೈ ಹರೀಶ್ ಅಭಿಪ್ರಾಯ ಪಟ್ಟರು. ಉಜಿರೆಯ ಶ್ರೀ.ಧ.ಮ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕಾಮರ್ಸ್ ಕ್ಯಾಂಪಸ್ ಅಸೊಸಿಯೆಶನ್’ನ ಉದ್ಘಾಟನೆಯ ಸಂಧರ್ಭದಲ್ಲಿ ಮಾತನಾಡುತ್ತಿದ್ದರು.
ಉಜಿರೆ : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಉಜಿರೆಯ ಶ್ರೀ ಧ. ಮಂ. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕರಾದ ಸಂಪತ್ ಕುಮಾರ್. ಕೆ ರವರು ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. “ಉತ್ತಮ ಸಂವಹನ ಕೌಶಲ್ಯ, ಹೊಸ ವಿಷಯಗಳ ತಿಳಿಯುವ ಉತ್ಸುಕತೆ ಹಾಗೂ ಏಕಾಗ್ರತೆಯ ಕಾರ್ಯಗಳಿಂದ ಮನುಷ್ಯನ ವ್ಯಕ್ತಿತ್ವ
ವಕೀಲರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಬೆಳ್ತಂಗಡಿಯಲ್ಲಿ ವಕೀಲರ ಸಂಘದವರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಪ್ರಸಾದ್ ಕೆ.ಎಸ್. ಅವರು, ವಕೀಲರ ಮನೆಗೆ ಬಂದು ಪೊಲೀಸರು ಹಲ್ಲೆ ಮಾಡಿರುವುದು ಖಂಡನೀಯ, ಹಲ್ಲೆಗೈದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಲ್ಲದೆ ಪುಂಜಾಲಕಟ್ಟೆ ಲೀಸ್ ಉಪನಿರೀಕ್ಷಕರನ್ನು ಕೂಡಲೇ ಅಮಾನತು ಮಾಡಬೇಕು ಇಲ್ಲದೆ ಹೋದರೆ ಮುಂದಕ್ಕೆ ಉಗ್ರವಾದ ಹೋರಾಟ ಮಾಡುವುದಾಗಿ ಹೇಳಿದರು.




























