Home Archive by category Fresh News (Page 685)

ಪುತ್ತೂರು: ಬಾಲವನದಲ್ಲಿ ಬಾಲರು” ಸಂಭ್ರಮದ ಮಕ್ಕಳ ದಿನಾಚರಣೆ -ನ.14 : ಡಾ.ಶಿವರಾಮ ಕಾರಂತ ಬಾಲವನದಲ್ಲಿ ಕಾರ್ಯಕ್ರಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುತ್ತೂರು ಡಾ.ಶಿವರಾಮ ಕಾರಂತ ಬಾಲವನ ಸಮಿತಿ ಹಾಗೂ ಪುತ್ತೂರು ಸಹಾಯಕ ಆಯುಕ್ತರ ಕಾರ್ಯಾಲಯದ ಜಂಟಿ ಆಶ್ರಯದಲ್ಲಿ “ಬಾಲವನದಲ್ಲಿ ಬಾಲರು” ಸಂಭ್ರಮದ ಮಕ್ಕಳ ದಿನಾಚರಣೆ ನ.14 ಸೋಮವಾರ ಬೆಳಗ್ಗೆ 9 ರಿಂದ ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ

ವಿಟ್ಲ :ಶಿಥಿಲಾವಸ್ಥೆಯಲ್ಲಿ ಕುಳಾಲು ಸರ್ಕಾರಿ ಶಾಲೆಯ ಕಟ್ಟಡ-ಕುಸಿಯುವ ಹಂತದಲ್ಲಿರುವ ನಾಲ್ಕು ಕೊಠಡಿಗಳು -ಶಾಸಕರಿಗೆ ಮನವಿ ನೀಡಿದರೂ ಸ್ಪಂದಿಸಿಲ್ಲ

ವಿಟ್ಲ : ಶಿಕ್ಷಣ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ÷್ಯದಿಂದಾಗಿ 92ವರ್ಷಗಳ ಇತಿಹಾಸ ಹೊಂದಿದ ಕುಳಾಲು ಸರಕಾರಿ ಶಾಲೆಯ ಕಟ್ಟಡ ಕುಸಿಯುತ್ತಿದ್ದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 92ವರ್ಷಗಳನ್ನು ಪೂರೈಸಿದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಳಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶತಮಾನದತ್ತ ದಾಪುಗಾಲು ಹಾಕುತ್ತಿದೆ. ಆದರೆ ಕುಸಿಯುವ ಹಂತದಲ್ಲಿರುವ ನಾಲ್ಕು ಕೊಠಡಿಗಳನ್ನು ತೆರವುಗೊಳಿಸಿ ಆರು ಹೊಸ ಕೊಠಡಿಗಳನ್ನು ನೀಡುವಂತೆ

ಗಟ್ಟಿ ಸಮಾಜದ ನಾಯ್ಗರು ಮತ್ತು ಮೇಲ್ಡರಿಗೆ ಗಡಿ ಪ್ರಸಾದ ಪ್ರಧಾನ

ಮಂಗಳೂರು : ಗಟ್ಟಿ ಸಮಾಜದ ನಾಯ್ಗರು ಮತ್ತು ಮೇಲ್ಡರಿಗೆ ಗಡಿ ಪ್ರಸಾದ ಪ್ರಧಾನ ಕಾರ್ಯಕ್ರಮವು ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರದಲ್ಲಿ ಸೋಮವಾದಂದು ಲಕ್ಷದೀಪೋತ್ಸವದ ಸಂದರ್ಭದಲ್ಲಿ ಗಟ್ಟಿ ಸಮಾಜದ ಹಾಗೂ ಊರವರ ಉಪಸ್ಥಿತಿಯಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.ಪ್ರಸ್ತುತ ಗಟ್ಟಿ ಸಮಾಜದ ನಾಯ್ಗರಾಗಿ ಕಾರ್ಯನಿರ್ವಹಿಸುತ್ತಿರುವ ಹರೀಶ್ಚಂದ್ರ ಗಟ್ಟಿ ಬೊಂಬಾಯಿಮನೆ ಹಾಗೂ ಮೇಲ್ಡರಾಗಿ ಕಾರ್ಯನಿರ್ವಹಿಸುತ್ತಿರುವ ಯಾದವ ಗಟ್ಟಿ ಪಿಲಾರ್ ಅವರಿಗೆ ಗಡಿ ಪ್ರಸಾದವನ್ನು ಪ್ರಧಾನ

ಕುಂದಾಪುರ : ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ

. ಕುಂದಾಪುರ: ಜನಪ್ರಿಯ ಸರ್ಕಾರವಿದ್ದರೆ, ಜನಪರ ನಾಯಕ ಅದರ ಮುಖ್ಯಸ್ಥನಾದರೆ ಯಾವ ರೀತಿ ಜನಸ್ಪಂದನೆ ಸಿಗುತ್ತದೆ ಎನ್ನುವುದಕ್ಕೆ ಈ ಬೈಂದೂರಿನ ಅಭಿವೃದ್ದಿಯ ಕತೆಯೇ ಸಾಕ್ಷಿ. ನಮ್ಮ ಸರ್ಕಾರದ ಅಭಿವೃದ್ದಿಯ ಕೆಲಸಗಳು ನಿಮ್ಮ ಮುಂದಿವೆ. ಕೇಂದ್ರ, ರಾಜ್ಯ ಸರ್ಕಾರದಂತೆ ಬೈಂದೂರಿನಲ್ಲಿಯೂ ಸಂಸದ ಹಾಗೂ ಶಾಸಕರ ಡಬಲ್ ಇಂಜಿನ್ ಸಮನ್ವಯತೆ ಇದೆ. ಇದು ಕೇವಲ ಬಾಯಿ ಮಾತಿನ ಸರ್ಕಾರವಲ್ಲ, ನಮ್ಮದು ಜನರಿಗೆ ಸ್ಪಂದಿಸುವ ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶ್ರೀ ಮನೋಹರ್ ಕೆ ಪುತ್ರನ್ ಮುಂಬೈ(75) ನಿಧನ

ಮೂಲತ: ಎರ್ಮಾಳು ತೆಂಕ ದವರಾದ ಇವರು ತಮ್ಮ ವಿದ್ಯಾಭ್ಯಾಸವನ್ನು ಊರಿನಲ್ಲಿ ಮುಗಿಸಿ ಮುಂಬೈಯಲ್ಲಿ ಉನ್ನತ ವ್ಯಾಸಂಗ ವನ್ನು ಮಾಡಿ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಕಂಪನಿ ಯಲ್ಲಿ 35 ವರ್ಷ ಉನ್ನತ ಹುದ್ದೆ ಯಲ್ಲಿ ಇದ್ದು ನಿವೃತ್ತಿಯನ್ನು ಹೊಂದಿರುತ್ತಾರೆ.ಮುಂಬೈ ಯಲ್ಲಿ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದು ಎರ್ಮಾಳು ತೆಂಕ ಮೊಗವೀರ ಸಭಾ ಮುಂಬೈ ಇದರ ಉಪಾಧ್ಯಕ್ಷರಾಗಿ ಕಾರ್ಯನಿರ್ವ ಹಿಸಿದ್ದು ಪ್ರಸ್ತುತ ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಮುಂಬೈ

ತಲಪಾಡಿ : RTO ಕಚೇರಿಗೆ ಲೋಕಾಯುಕ್ತ ದಾಳಿ

ಉಳ್ಳಾಲ: ತಲಪಾಡಿ ಆರ್ ಟಿ ಓ ಕಚೇರಿಗೆ ಲೋಕಾಯುಕ್ತ ಎಸ್.ಪಿ ಲಕ್ಷ್ಮೀಗಣೇಶ್ ನೇತೃತ್ವದ ತಂಡ ದಾಳಿ ನಡೆಸಿ ಸತತ ಮೂರು ಗಂಟೆಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಕೇರಳ – ಕರ್ನಾಟಕ ಗಡಿಭಾಗ ಮೇಲಿನ ತಲಪಾಡಿಯಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ತಲಪಾಡಿ ತನಿಖಾ ಠಾಣೆಗೆ ಲೋಕಾಯುಕ್ತ ದಾಳಿ ನಡೆಸಿದೆ. ಲಾರಿ ಚಾಲಕರಿಂದ ಲಂಚ ಪಡೆಯುವ ಆರೋಪಗಳು ಈ ಹಿಂದೆ ಹಲವು ಬಾರಿ ವ್ಯಕ್ತವಾಗಿತ್ತು. ಈ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದ

ಸಮಾಜಸೇವಕ ವಾಸುದೇವ ಆರ್. ಕೋಟ್ಯಾನ್ ನಿಧನ

ಭಾರತ್ ಕೋಅಪರೇಟಿವ್ ಬ್ಯಾಂಕ್ ಮುಂಬಯಿಯ ಮಾಜಿ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಹೆಜಮಾಡಿ, ಬಿಲ್ಲವರ ಸಂಘ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೆಜಮಾಡಿ ಇದರ ಗೌರವಾಧ್ಯಕ್ಷರಾಗಿ, ಮಾರ್ಗದರ್ಶಕರಾಗಿ, ಸಂಘದ ಹಾಗೂ ಗಡಿಯ ಸಮಗ್ರ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡುಪಾಗಿಸಿಕೊಂಡ ವಾಸುದೇವ ಆರ್. ಕೋಟ್ಯಾನ್ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಮುಂಬಯಿಯಲ್ಲಿ ಇಂದು ಸಂಜೆ 7 ಗಂಟೆಗೆ ಜರುಗಲಿದೆ.

ಕೆಳಮಟ್ಟದ ರಾಜಕಾರಣ ಯಾರೂ ಮಾಡಬಾರದು : ಗೋಪಾಲ ಪೂಜಾರಿ

ಕುಂದಾಪುರ: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮಂಜೂರು ಮಾಡಿದ ಕೆಲವು ಯೋಜನೆಗಳನ್ನು ಇಂದು ಮುಖ್ಯಮಂತ್ರಿಗಳ ಮೂಲಕ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ ಜನತೆಗೆ ತಪ್ಪು ಮಾಹಿತಿ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಇಂತಹ ಕೆಳಮಟ್ಟದ ರಾಜಕಾರಣ ಹಿಂದೆ ಯಾವೊಬ್ಬ ಜನಪ್ರತಿನಿಧಿಯೂ ಮಾಡಿಲ್ಲ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

ಅಡಕೆ ಬೆಳೆಯಲ್ಲಿ ಬಿಳಿಚುಕ್ಕಿ ರೋಗ : ವೈಜ್ಞಾನಿಕ ಕಾರಣ ಪತ್ತೆ ಹಚ್ಚಿ ನಿವಾರಣೆಗೆ ಕ್ರಮ : ಕುಂದಾಪುರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ

ಕುಂದಾಪುರ: ಅಡಕೆ ಬೆಳೆಯಲ್ಲಿ ಬಿಳಿಚುಕ್ಕೆ ರೋಗ ಕಾಣಿಸಿಕೊಳ್ಳುತ್ತಿದ್ದು, ಕೃಷಿಕರು ಆತಂಕದಲ್ಲಿದ್ದಾರೆ. ಈ ರೋಗದ ಬಗ್ಗೆ ಕೃಷಿ ವಿಶ್ಯವಿದ್ಯಾಲಯ ಹಾಗೂ ಕೇಂದ್ರ ಸರ್ಕಾರದ ತಂಡ ಪರಿಶೀಲನೆ ನಡೆಸುತ್ತಿದ್ದು, ವೈಜ್ಞಾನಿಕವಾದ ಕಾರಣವನ್ನು ಪತ್ತೆ ಹಚ್ಚಿ ಬಳಿಕ ಅದರ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ರೋಗ ಹರಡದಂತೆ ವಿಜ್ಞಾನಿಗಳು ತಿಳಿಸಿರುವ ಔಷಧಿಯ ಸಿಂಪಡನೆ ಕಾರ್ಯಕ್ಕೆ ಸರ್ಕಾರ ಸಹಕಾರ ನೀಡಲಿದೆ. ಮೂಲರೋಗವನ್ನು ಪತ್ತೆಹಚ್ಚಿ ಅದರ ನಿವಾರಣೆಗೆ ಔಷಧಿಯನ್ನೂ

ಮೂಡುಬಿದಿರೆ ಪುರಪ್ರವೇಶಗೈದ ಶ್ರೀರಾಮ ದಿಗ್ವಿಜಯ ರಥಯಾತ್ರೆ

ಮೂಡುಬಿದಿರೆ: ‘ಶ್ರೀ ರಾಮದಾಸ, ಆಶ್ರಮದ ನೇತೃತ್ವದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಸಾಧು-ಸಂತರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಶ್ರೀರಾಮ ದಿಗ್ವಿಜಯ ರಥಯಾತ್ರೆಯು ಮೂಡುಬಿದಿರೆಗೆ ಆಗಮಿಸಿತು. ಶ್ರೀ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಶ್ರೀ ವಿದ್ಯಾ ನಂದ ಸ್ವಾಮೀಜಿ, ಮೂಡುಬಿದಿರೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ , ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ವಿಹಿಂಪ ಬಜರಂಗದಳದ