Home Archive by category Puttur (Page 3)

ಶಾಂತಾ ಪುತ್ತೂರು ಇವರಿಗೆ ಕೆಂಪಮ್ಮ ರಾಜ್ಯ ಪುರಸ್ಕಾರ

ದಿನಾಂಕ 20..10..2022ರಂದು ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಡೆದ ನಗೆ ಹಬ್ಬ ,ಸಾಂಸ್ಕೃತಿಕ ಕರ‍್ಯಕ್ರಮ , ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ನಾಡಿನ ಮಹಿಳಾ ಸಾಧಕರಿಗೆ ನೀಡುವ ಕೆಂಪೇಗೌಡರ ತಾಯಿ ಕೆಂಪಮ್ಮ ನವರ ಹೆಸರಿನಲ್ಲಿ ನೀಡುವ ಕೆಂಪಮ್ಮ ರಾಜ್ಯ ಪ್ರಶಸ್ತಿ ಶಾಂತಾ ಪುತ್ತೂರು ರವರಿಗೆ ಶಿಕ್ಷಣ ಹಾಗೂ ಸಾಹಿತ್ಯ ಸೇವೆಗಾಗಿ ಲಭಿಸಿದೆ.ಶಾಂತಾ

ಪುತ್ತೂರು : ಅ.27 ರಂದು ಚೆನ್ನಾವರ ಮುಹಿಯುದ್ದಿನ್ ಜುಮಾ ಮಸೀದಿಯ ಖಿದ್ಮತುಲ್ ಇಸ್ಮಾಂ ಜಮಾಅತ್ ಕಮಿಟಿಗೊಳಪಟ್ಟ ಸಿರಾಜುಲ್ ಉಲೂಂ ಮದ್ರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ

ಪುತ್ತೂರು: ಸುಮಾರು ರೂ. 30ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೆನ್ನಾವರ ಮುಹಿಯುದ್ದಿನ್ ಜುಮಾ ಮಸೀದಿಯ ಖಿದ್ಮತುಲ್ ಇಸ್ಮಾಂ ಜಮಾಅತ್ ಕಮಿಟಿಗೊಳಪಟ್ಟ ಸಿರಾಜುಲ್ ಉಲೂಂ ಮದ್ರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಅ. 27ರಂದು ನಡೆಯಲಿದೆ ಎಂದು ಮಸೀದಿ ಕಮಿಟಿ ಅಧ್ಯಕ್ಷ ಶಾಫಿ ಚೆನ್ನಾರ್ ತಿಳಿಸಿದ್ದಾರೆ. ಅವರು ಮಂಗಳವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನೂತನ ಮದ್ರಸ ಕಟ್ಟಡವನ್ನು ಸಯ್ಯದ್ ಬರ‍್ರುಸ್ಸಾದಾತ್ ಇಬ್ರಾಹಿಂ

ಪುತ್ತೂರು: ರೈಲಿನಡಿಗೆ ಬಿದ್ದು ವ್ಯಕ್ತಿ ಮೃತ್ಯು

ಪುತ್ತೂರು: ಮುರ ಸಮೀಪ ರೈಲಿನಡಿಗೆ ವ್ಯಕ್ತಿಯೊಬ್ವರು ಬಿದ್ದು ಮೃತಪಟ್ಟ ಘಟನೆ ಅ.೨೩ ರಂದು ನಡೆದಿದೆ. ಮೂಲತಃ ಕಲ್ಲೇಗ ನಿವಾಸಿಯಾಗಿದ್ದು ಬಲ್ನಾಡಿನಲ್ಲಿ ವಾಸ್ತವ್ಯ ಇರುವ ವಿಜಯ ಗೌಡ(52) ಮೃತಪಟ್ಟವರು. ಅವರು ಮುರ ಗೌಡ ಸಮುದಾಯ ಭವನದಲ್ಲಿ ಉತ್ತರಕ್ರಿಯೆ ಕಾರ್ಯಕ್ರಮಕ್ಕೆ ಬಂದವರು ಮುರ ರೈಲು ಹಳಿಯಲ್ಲಿ ಬರುತ್ತಿದ್ದ ರೈಲಿನಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆನ್ನಲಾಗಿದೆ.

ವಿಟ್ಲ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ

ವಿಟ್ಲ: ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಪಾರಾಗಿದ್ದಾರೆ. ದೇರಳಕಟ್ಟೆ ಮೂಲದ ಕುಟುಂಬ ಮಾಣಿ ಕಡೆಗೆ ಬರುತ್ತಿದ್ದಾಗ ಓಮ್ನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಗಮನಿಸಿದ ಚಾಲಕ ಮತ್ತು ಪ್ರಯಾಣಿಕರು ವಾಹನ ನಿಲ್ಲಿಸಿ ಹೊರಗಡೆ ಬಂದಿದ್ದಾರೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ಬಳಿಕ ವಿನಯ ಎಂಬವರ ಸರ್ವೀಸ್ ಸ್ಟೇಷನ್ ನಿಂದ ನೀರು ಹರಿಸಲಾಯಿತು. ಘಟನೆಯಲ್ಲಿ ವಾಹನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.

ಕೋಟೇಶ್ವರ ಗ್ರಾ.ಪಂ. ಮುಂಭಾಗದ ನಿರುಪಯುಕ್ತ ಬೃಹತ್ ಟ್ಯಾಂಕ್ ತೆರವು

ಕುಂದಾಪುರ : ಕಳೆದ ಹದಿನೈದು ವರ್ಷಗಳಿಂದ ನಿರುಪಯುಕ್ತವಾಗಿದ್ದ ನೀರಿನ ಬೃಹತ್ ಟ್ಯಾಂಕ್ ತೆರವುಗೊಳಿಸುವ ಕಾರ್ಯಾಚರಣೆ ಕೋಟೇಶ್ವರ ಗ್ರಾಪಂ ವತಿಯಿಂದ ವಿವಿಧ ಇಲಾಖೆಗಳ ಸಹಕಾರದಲ್ಲಿ ಮಂಗಳವಾರ ನಡೆಯಿತು. ಸತತ 9 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದಾಗಿ ಟ್ಯಾಂಕ್ ನೆಲಕ್ಕುರುಳಿದ್ದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.ಈ ಬೃಹತ್ ನೀರಿನ ಟ್ಯಾಂಕ್ ಇದ್ದು, 1986ರಲ್ಲಿ ನಿರ್ಮಾಣವಾದ 2 ಲಕ್ಷ ಲೀಟರ್ ಸಂಗ್ರಹ ಸಾಮರ್ಥ್ಯದ ಹೆಡ್ಟ್ಯಾಂಕ್ನಲ್ಲಿ ಸೋರಿಕೆ

ಬೆಳ್ಳಾರೆ : ಮನೆಗೆ ಬೆಂಕಿ ಬಿದ್ದು ಮನೆ ಯಜಮಾನ ಜೀವಂತ ದಹನ

ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯೊಳಗೆ ಮಲಗಿದ್ದ ಯಜಮಾನ ಜೀವಂತ ದಹನವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೊಂದು ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪರ್ಲಿಕಜೆ ಸುಧಾಕರ (47) ದುರ್ಘಟನೆಯಲ್ಲಿ ಸಾವಿಗೀಡಾದ ವ್ಯಕ್ತಿ. ಇಂದು ಬೆಳಿಗ್ಗೆ ಸುಧಾಕರರು ಮನೆಯಲ್ಲಿ ಮಲಗಿದ್ದು, ಪತ್ನಿ ಟ್ಯಾಪಿಂಗ್‌ಗೆಂದು ಹೋಗಿದ್ದರು. ಮಗಳು ಶಾಲೆಗೆ ತೆರಳಿದ್ದಳು. ಈ ಹೊತ್ತಿನಲ್ಲಿ ಬೆಂಕಿ ಮನೆಯ ಒಂದು

ಪುತ್ತೂರು: ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

ಪುತ್ತೂರು: ಬೈಕೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಬಸ್‌ಗೆ ಡಿಕ್ಕಿಯಾದ ಘಟನೆ ಸೆ.3ರಂದು ರಾತ್ರಿ ಪರ್ಲಡ್ಕ  ರಸ್ತೆಯಲ್ಲಿ ನಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ವೀರಮಂಗಲದ ಭರತ್‌ರಾಜ್ ಗೌಡ ಎಂಬವರು ಮೃತಪಟ್ಟಿದ್ದಾರೆ. ಪುತ್ತೂರು ಗಣೇಶೋತ್ಸವ ಶೋಭಾಯಾತ್ರೆಗೆಂದು ಬಂದಿದ್ದ ಕೊಳ್ತಿಗೆ ಪೆರ್ಲಂಪಾಡಿ ನಿವಾಸಿ ಜಯದೀಪ್ ಅವರ ಪುತ್ರ ಧನುಷ್(24ವ) ಮತ್ತು ವೀರಮಂಗಲ ಖಂಡಿಗ ಚಂದ್ರಶೇಖರ್ ಗೌಡ ಅವರ ಪುತ್ರ ಭರತ್ ರಾಜ್ ಗೌಡ(22ವ)ರವರು ಡ್ಯೂಕ್

ಖ್ಯಾತ ಭಾಷಾ ವಿಜ್ಞಾನಿ, ಸಾಹಿತಿ ಕೋಡಿ ಕುಶಾಲಪ್ಪ ಗೌಡ ನಿಧನ

ಹಿರಿಯ ವಿದ್ವಾಂಸ, ಭಾಷಾ ವಿಜ್ಞಾನಿ, ಖ್ಯಾತ ಸಾಹಿತಿ ಪ್ರೊಕೋಡಿ ಕುಶಾಲಪ್ಪ ಗೌಡ(91) ವಯೋ ಸಹಜ ಅಸೌಖ್ಯದಿಂದ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು. ದಕ್ಷಿಣ ಕನ್ನಡದ ಪೆರಾಜೆ ಗ್ರಾಮದ ಕೋಡಿ ಮನೆತನದ ಕೃಷ್ಣಪ ಗೌಡರ ಹಾಗೂ ಗೌರಮ್ಮನವರ ತೃತೀಯ ಪುತ್ರರಾಗಿ 1931 ಮೇ 30 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಪೆರಾಜೆ ಹಾಗೂ ಸುಳ್ಯದಲ್ಲಿ ಮುಗಿಸಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಮಾಡಿದರು. ಮಡಿಕೇರಿ ಸರಕಾರಿ

ಪುತ್ತೂರು ಉಪ ವಿಭಾಗದ DYSP ಯಾಗಿದ್ದ ಡಾ. ಗಾನಾ ಪಿ. ಕುಮಾರ್ ವರ್ಗಾವಣೆ.

ಪುತ್ತೂರು : ಪುತ್ತೂರು ಉಪ ವಿಭಾಗದ ಡಿವೈಎಸ್ಪಿಯಾಗಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಕರ್ನಾಟಕ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರು ಆ 19 ರಂದು ಆದೇಶ ಹೊರಡಿಸಿದ್ದಾರೆ. ಅವರ ಜಾಗಕ್ಕೆ ಪ್ರಸ್ತುತ ಬೆಂಗಳೂರಿನಲ್ಲಿಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಯ್ಯ ಹಿರೇಮಠ ಅವರನ್ನು ನೇಮಕ ಮಾಡಲಾಗಿದೆ. 2020ರ ಸೆಪ್ಟಂಬರ್‌ ತಿಂಗಳಿನಲ್ಲಿ ಡಾ.ಗಾನಾ ಪಿ.ಕುಮಾರ್ ಅವರು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ

ಸ್ವಾಮೀಜಿಗಳಿಂದ ಅನಾಗರಿಕ ವರ್ತನೆ ಸರಿಯಲ್ಲ, ಹೆಚ್.ಡಿ. ಕುಮಾರಸ್ವಾಮಿ ಆರೋಪ

ಹತ್ಯೆ ಮಾಡಿದವರ ತಲೆ ಕಡಿಯುತ್ತೇವೆ ಎಂಬ ಹೇಳಿ ನೀಡಿರುವ ಕಾಳಿ ಸ್ವಾಮಿ ವರ್ತನೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಅವರು ಪುತ್ತೂರು ನೆಹರೂನಗರದ ಮಾಸ್ಟರ್ ಪ್ಲಾನರಿಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮಂದೊಂದಿಗೆ ಮಾತನಾಡಿದರು. ಇಂತಹ ಹೇಳಿಕೆ ನೀಡುವುದು ಸ್ವಾಮೀಜಿಗಳ ಲಕ್ಷಣವಲ್ಲ. ಸ್ವಾಮೀಜಿಗಳು ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಸಮಾಜದ ಕಲುಷಿತ ವಾತಾವರಣಕ್ಕೆ ಕಾರಣಕರ್ತರಾಗಿದ್ದಾರೆ ಎಂದು ತಿಳಿಸಿದರು. ಈಗಾಗಲೇ ಜಿಲ್ಲೆಯಲ್ಲಿ