Home Archive by category udupi (Page 13)

ಹಿರೇಮಗಳೂರಿನ ಕೋದಂಡರಾಮ ಆಲಯದ ಅರ್ಚಕ ಕಣ್ಣನ್‍ರಿಗೆ ನೋಟೀಸು

ಹಿರೇಮಗಳೂರಿನ ಕೋದಂಡರಾಮ ಆಲಯದ ಅರ್ಚಕ ಕಣ್ಣನ್‍ರಿಗೆ ಹೆಚ್ಚುವರಿ ಸಂಬಳ ಹಿಂತಿರುಗಿಸುವಂತೆ ಚಿಕ್ಕಮಗಳೂರು ತಹಶಿಲ್ದಾರ್ ಸುಮಂತ್ ನೋಟೀಸು ನೀಡಿರುವುದು ಸುದ್ದಿ. ಆದರೆ ಆದಾಯ ತೀರಾ ವ್ಯತ್ಯಾಸದ ಹಲವು ಆಲಯಗಳಿಗೆ ನೋಟೀಸು ನೀಡಿರುವುದು ಕಂಡು ಬಂದಿದೆ. ಕಣ್ಣನ್ ಅರ್ಚಕರಾಗಿರುವ ಆಲಯದ ವಾರ್ಷಿಕ ಆದಾಯ ಕೊನೆ ದರ್ಜೆ ದೇವಾಲಯದ ಆದಾಯಕ್ಕಿಂತಲೂ ಕಡಿಮೆ ಇದೆ.

ಉಡುಪಿ: ಬನ್ನಂಜೆ ಬಿಲ್ಲವ ಸಂಘಕ್ಕೆ ನಿಂದನೆ: ಕ್ರಮಕ್ಕೆ ಒತ್ತಾಯಿಸಿ ಎಸ್‍ಪಿಗೆ ಮನವಿ

ಉಡುಪಿಯ ಬನ್ನಂಜೆ ಬಿಲ್ಲವ ಸಂಘದ ವಿರುದ್ದ ಕಿಡಿಗೇಡಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದ್ದು, ಬಿಲ್ಲವ ಸಮಾಜ ಬಾಂಧವರು ಇದರಿಂದ ಆಕ್ರೋಶ ಗೊಂಡಿದ್ದು, ಕೃತ್ಯ ಎಸಗಿದ ವ್ಯಕ್ತಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ, ಉಡುಪಿ ಪೆÇಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ

ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ, ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರೇ.. ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಉಡುಪಿಯಲ್ಲಿ ಬಿಜೆಪಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ ಸಚಿವರು.ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ, ಬಿಜೆಪಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ. ಎಷ್ಟು ಜನರಿಗೆ ನೀರಾವರಿ ವ್ಯವಸ್ಥೆ ಮಾಡಿದ್ದೀರಿ ಉದ್ಯೋಗ

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಮೂಲ್ಕಿ:ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ (ರಿ.)ಇದರ ರಜತ ಮಹೋತ್ಸವವು ಮಾರ್ಚ್ 10ರಂದು ನಡೆಯಲಿದ್ದು, ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ.ರಾಜಶೇಖರ ಕೋಟ್ಯಾನ್ ರವರು ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಗೀತಾಂಜಲಿ ಸುವರ್ಣ ಇವರನ್ನು ಬಿಲ್ಲವರ ಮಹಿಳಾ

ಉಡುಪಿ: ಕೇರಳದಲ್ಲಿ ಬಾಂಬ್ ಸ್ಫೋಟ ವಿಚಾರ: ಕರಾವಳಿ ಗಡಿ ಭಾಗದಲ್ಲಿ ತೀವ್ರ ನಿಗಾ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಕೇರಳ ರಾಜ್ಯದ ಎರ್ನಾಕುಲಂನಲ್ಲಿ ಬಾಂಬ್ ಸ್ಫೋಟ ನಡೆದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದ್ದೇವೆ. ಕರಾವಳಿ ಭಾಗ ಮತ್ತು ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗುಪ್ತಚರ ಇಲಾಖೆ ತೀವ್ರ ನಿಗಾ ಇರಿಸುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಅವರು ಉಡುಪಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕರ್ನಾಟಕದಲ್ಲಿ ಬಾಂಬ್ ಸ್ಫೋಟದಂತಹ ಘಟನೆಗಳು ನಡೆಯಲು ಬಿಡಲ್ಲ. ಯಾವುದೇ ವ್ಯಕ್ತಿ ಅಥವಾ

ಉಡುಪಿ: ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವು

ಕಂಟೇನರ್ ಲಾರಿಯಲ್ಲಿ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಲ್ಪೆಯ ತೊಟ್ಟಂನಲ್ಲಿ ನಡೆದಿದೆ.ಮೃತರನ್ನು ಒರಿಸ್ಸಾ ಮೂಲದ ಬಾಬುಲ್ಲ (38) ಹಾಗೂ ಭಾಸ್ಕರ್ (40) ಎಂದು ಗುರುತಿಸಲಾಗಿದೆ. ತೊಟ್ಟಂನಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ಗ್ರಾನೈಟ್ ತರಲಾಗಿತ್ತು.ಕಂಟೇನರ್ ಲಾರಿಯಲ್ಲಿದ್ದ ಗ್ರಾನೈಟ್ ಇಳಿಸುವಾಗ ಆಕಸ್ಮಿಕವಾಗಿ ಗ್ರಾನೈಟ್ ಬಿದ್ದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

“ದೇವತಾ”ಕಲಾ ಪ್ರದರ್ಶನ : ವಿದುಷಿ ಪ್ರವೀಣ ಮೋಹನ್ ಅವರಿಂದ ವಿಭಿನ್ನ ಕಲಾಕೃತಿಗಳ ಪ್ರದರ್ಶನ

ಉಡುಪಿಯ ಅದಿತಿ ಗ್ಯಾಲರಿ ವತಿಯಿಂದ “ದೇವತಾ” ವಿಭಿನ್ನ ಕಲಾ ಪ್ರದರ್ಶನ ಮೇ 26 ರಿಂದ 28 ರವರೆಗೆ ಪ್ರತೀದಿನ ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆ ತನಕ ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಅದಿತಿ ಗ್ಯಾಲರಿನಲ್ಲಿ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನದ ಉದ್ಘಾಟನಾ ಸಮಾರಂಭವು ಮೇ 25, 2023 ರಂದು ಸಂಜೆ 5:15 ಕ್ಕೆ ಅದಿತಿ ಗ್ಯಾಲರಿನಲ್ಲಿ ಜರುಗಲಿದೆ. ಈ ಸಮಾರಂಭದಲ್ಲಿ ಮೂಡುಬಿದರೆಯ ಆಳ್ವಾಸ್ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ, ಉಜ್ವಲ್ ಗ್ರೂಪ್‌ನ

ಅನಧಿಕೃತ ಮರಳು ದಕ್ಕೆಯಲ್ಲಿದ್ದ 5 ಲಾರಿಗಳು ವಶ

ಉಡುಪಿ : ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಹಟ್ಟಿಯಂಗಡಿ ಹಾಗೂ ಹೆಮ್ಮಾಡಿ ಪರಿಸರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಕಾರ್ಯಾಚರಣೆ ನಡೆಸಿ 5 ಟಿಪ್ಪರ್ ಲಾರಿಗಳನ್ನು ವಶ ಪಡಿಸಿಕೊಂಡಿದ್ದಾರೆ.ಹಟ್ಟಿಯಂಗಡಿ ಗ್ರಾಮದ ಹಟ್ಟಿಕುದ್ರು ಹಾಗೂ ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಎಂಬಲ್ಲಿ ಪಂಚಗಂಗವಲ್ಲಿ ನದಿಯಿಂದ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ, ಸಾಗಾಟ

ರಾಷ್ಟ್ರ ಮಟ್ಟದ ಸಮ್ಮೇಳನ : ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್- ಮ್ಯಾಸೊಕಾನ್ 2023

ಮೆಸೊಕಾನ್ 2023 – ಮಣಿಪಾಲ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ ಅನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗವು 2023 ರ ಮೇ 12 ಮತ್ತು 13 ರಂದು ಕೆಎಂಸಿ ಮಣಿಪಾಲದ ಡಾ ಟಿಎಂಎ ಪೈ ಆಡಿಟೋರಿಯಂನಲ್ಲಿ ಆಯೋಜಿಸಿದೆ. ಈ ಸಮ್ಮೇಳನದಲ್ಲಿ 150 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು, ಅವರು ಮುಖ್ಯವಾಗಿ ಭಾರತದಾದ್ಯಂತ ವಿವಿಧ ಆಂಕೊಲಾಜಿ ಮತ್ತು ಶಸ್ತ್ರಚಿಕಿತ್ಸಾ

ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನ ವಿಜೃಂಭಣೆಯಿಂದ ನಡೆದ ವಾರ್ಷಿಕ ರಥೋತ್ಸವ

ಕಾರ್ಕಳ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟ್ರಮಣ ದೇವಸ್ಥಾನದ ವಾರ್ಷಿಕ ರಥೋತ್ಸವ ವಿಜಂಭಣೆಯಿಂದ ನಡೆಯಿತು.ಊರ ಪರವೂರ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರರು, ದೇವಸ್ಥಾನದ ತಂತ್ರಿ ಹಾಗೂ ಅರ್ಚಕ ವೃಂದ ಹಾಗೂ ಆಡಳಿತ ಮಂಡಳಿಯ ಸದಸ್ಯರು ಜಿ. ಎಸ್. ಬಿ. ಸಮಾಜದ ಭಾಂದವರು ಶ್ರೀ ವೆಂಕಟ್ರಮಣ ದೇವಸ್ಥಾನದ ರಥೋತ್ಸವ ದಲ್ಲೀ ಭಾಗಿಯಾದರು.