ಜಮ್ಮು-ಕಾಶ್ಮೀರದ ಮಾಜೀ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮನೆ ಮೇಲೆ ಸಿಬಿಐ ದಾಳಿ

ಜಮ್ಮು ಮತ್ತು ಕಾಶ್ಮೀರದ ಹೈಡಲ್ ಯೋಜನೆ ಗುತ್ತಿಗೆ ನೀಡುವುದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ಜಮ್ಮು ಕಾಶ್ಮೀರದ ಮಾಜೀ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿತು.
ಸತ್ಯಪಾಲ್ ಮಲಿಕ್‌ರಿಗೆ ಸೇರಿದ ಮತ್ತು ಆ ಪ್ರಕರಣ ಸಂಬಂಧಿ 40 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಯಿತು. ಗುರುವಾರ ಮುಂಜಾನೆಯೇ ಸಿಬಿಐ ಅಧಿಕಾರಿಗಳ ತಂಡ ಮಾಜೀ ರಾಜ್ಯಪಾಲರ ಮನೆ ಹೊಕ್ಕಿತು.
2200 ಕೋಟಿ ರೂಪಾಯಿ ಮೊತ್ತದ ಹಲವು ಕಿರು ಜಲವಿದ್ಯುತ್ ಯೋಜನೆ ಗುತ್ತಿಗೆ ನೀಡುವಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಈ ದಾಳಿ ನಡೆದಿದೆ. 2018-19 ರ ನಡುವೆ ಈ ಯೋಜನೆಯ ಎರಡು ಕಡತಗಳಿಗೆ ಮಂಜೂರಾತಿ ನೀಡಲು 300 ಕೋಟಿ ರೂಪಾಯಿ ಲಂಚ ಪಡೆದರು ಎಂದು ಆರೋಪ ಇದೆ.
ಕಳೆದ ತಿಂಗಳು ಈ ಯೋಜನೆಯ ಭ್ರಷ್ಟಾಚಾರದ ಸಂಬಂಧ ದಿಲ್ಲಿ ಮತ್ತು ಕಾಶ್ಮೀರಗಳ ಎಂಟು ಸ್ಥಳಗಳಲ್ಲಿ ಶೋಧ ನಡೆದಿತ್ತು. ಆಗ 21000 ನಗದು ವಶಪಡಿಸಿಕೊಂಡುದಲ್ಲದೆ ಕೆಲವು ವಿದ್ಯುನ್ಮಾನ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆ ದಾಖಲೆಗಳ ಆಧಾರದ ಮೇಲೆ ಸತ್ಯಪಾಲ್ ಮಲಿಕ್‌ರ ಮನೆ ಮೇಲೆ ದಾಳಿ ನಡೆದಿದೆ ಎಂದು ಹೇಳಲಾಗಿದೆ.

Related Posts

Leave a Reply

Your email address will not be published.