ಶಾಸಕ ವೇದವ್ಯಾಸ್ ಕಾಮತ್ ಅವರ ವತಿಯಿಂದ ಸರ್ಕಸ್ ತುಳು ಸಿನಿಮಾ ಆಶ್ರಮದ ಮಕ್ಕಳಿಗೆ ಉಚಿತ ಪ್ರದರ್ಶನ
ಯಶಸ್ವೀ ಪ್ರದರ್ಶನಗಳನ್ನು ಕಾಣುತ್ತಿರುವ ಸರ್ಕಸ್ ಸಿನಿಮಾ ಇದೀಗ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಶಾಸಕ ವೇದವ್ಯಾಸ್ ಕಾಮತ್ ಅವರ ವತಿಯಿಂದ ವಿವಿಧ ಆಶ್ರಮದ ಮಕ್ಕಳಿಗೆ ಉಚಿತ ಪ್ರದರ್ಶನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಎಲ್ಲಾ ಮಕ್ಕಳು ಉತ್ಸಾಹದಿಂದಲೇ ಸರ್ಕಸ್ ಸಿನಿಮಾ ವೀಕ್ಷಿಸಿದರು.
ದೇಶ ವಿದೇಶ ಮತ್ತು ಕರಾವಳಿಯಲ್ಲಿ ಸರ್ಕ್‍ಸ್ ಸಿನಿಮಾ ಹೌಸ್‍ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ಸಿನಿಮಾ ಪ್ರೇಕ್ಷಕರು ಸಿನಿಮಾ ವೀಕ್ಷಿಸಿ ಫುಲ್‍ಮಾಕ್ರ್ಸ್ ನೀಡಿದಲ್ಲದೆ ಸರ್ಕಸ್ ಚಿತ್ರತಂಡದ ಕಲಾವಿದರ ಅಭಿನಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೀಗ ಶಾಸಕ ವೇದವ್ಯಾಸ್ ಕಾಮತ್ ಅವರ ವಿಶೇಷ ಮುತುವರ್ಜಿಯಿಂದ ಮಂಗಳೂರಿನ ವಿವಿಧ ಆಶ್ರಮದ ಮಕ್ಕಳಿಗೆ ಸರ್ಕಸ್ ಸಿನಿಮಾ ಉಚಿತ ವೀಕ್ಷಣೆಗೆ ವ್ಯವಸ್ಥೆಯನ್ನು ಮಾಡಿದರು. ಈ ಬಗ್ಗೆ ನಟ ರೂಪೇಶ್ ಶೆಟ್ಟಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಆಶ್ರಮದ ಮಕ್ಕಳು ಮತ್ತು ಸಿಬ್ಬಂದಿಗಳು ಸಿನಿಮಾ ವೀಕ್ಷಿಸಿ ಸಂಭ್ರಮಪಟ್ಟರು.