ದ.ಕ. ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಳಂಜದಲ್ಲಿ ಶನಿವಾರ ಬೆಳಿಗ್ಗೆ 8.30ರವರೆಗೆ 24 ಗಂಟೆಗಳಲ್ಲಿ 12.90 ಸೆಂ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲೇ ಅತ್ಯಧಿಕ. ಬೆಳ್ತಂಗಡಿ ತಾಲ್ಲೂಕಿನ ಹೊಸಂಗಡಿಯಲ್ಲಿ, 10.40 ಸೆಂ.ಮೀ., ಕುಕ್ಕೇಡಿಯಲ್ಲಿ 10.25 ಸೆಂ.ಮೀ. ಪಡಂಗಡಿ, ಮಾಲಾಡಿ ಮತ್ತು ಲಾಯಿಲದಲ್ಲಿ ತಲಾ 9.50 ಸೆಂ.ಮೀ.ಮಳೆಯಾಗಿದೆ.
ಮಂಗಳೂರು ತಾಲ್ಲೂಕಿನ ಬಾಳದಲ್ಲಿ 11.30 ಸೆಂಮೀ, ಕಿನ್ನಿಗೋಳಿಯಲ್ಲಿ 9.25, ಬಂಟ್ವಾಳ ತಾಲ್ಲೂಕಿನ ಪಿಲಾತಬೆಟ್ಟುವಿನಲ್ಲಿ 10.20 ಸೆಂ.ಮೀ, ಸುಳ್ಯ ತಾಲ್ಲೂಕಿನ ಮಂಡೆಕೋಲಿನಲ್ಲಿ 10.45 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
