ಬಜೆಟ್ ನಲ್ಲಿ ಬೆಂಗಳೂರಿಗೆ ಹೆಚ್ಚಿನ ಅನುದಾನ, ಇತರ ನಗರದ ಜನರಿಗೆ ಅನ್ಯಾಯ : ಡಿವೈಎಫ್ಐನ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ನಲ್ಲಿ ಮಂಗಳೂರಿಗೆ ಸರಕಾರಿ ಮೆಡಿಕಲ್ ಕಾಲೇಜ್ ಘೋಷಣೆಯ ನಿರೀಕ್ಷೆ ಹುಸಿಯಾಯಿತು. ದ.ಕ ಜಿಲ್ಲೆಗೆ ನಿರ್ದಿಷ್ಟ ಕೊಡುಗೆ ಘೋಷಿಸದೆ ನಿರಾಸೆ ಉಂಟು ಮಾಡಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಯಾವುದೇ ಘೋಷಣೆಗಳಿಲ್ಲ, ಅತಿಥಿ ಶಿಕ್ಷಕರ, ಉಪನ್ಯಾಸಕರ ಖಾಯಮಾತಿಗೆ ಯಾವುದೇ ಚಕಾರ ಎತ್ತದ ಬಜೆಟ್ ಮಂಡಿಸಿದ್ದಾರೆ.
ಬಿಬಿಎಂಪಿ ಚುನಾವಣೆಯ ದೃಷ್ಟಿಕೋನದಲ್ಲಿ ರಾಜಧಾನಿ ಬೆಂಗಳೂರಿಗೆ ಹೆಚ್ಚಿನ ಅನುದಾನ ಕೊಟ್ಟು ಇತರ ನಗರದ ಜನರಿಗೆ ಅನ್ಯಾಯ ಮಾಡಲಾಗಿದೆ.
ಹೊಸ ಶಿಕ್ಷಣ ನೀತಿಯನ್ನು ರದ್ದೂಗೊಳಿಸಿರುವುದು ಮತ್ತು ಕೇಂದ್ರ ರದ್ದುಪಡಿಸಿದ್ದ ಎಪಿಎಂಸಿ ಕಾಯ್ದೆಯನ್ನು ವಾಪಸ್ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ ಆದರೆ ಐದು ಗ್ಯಾರೆಂಟಿಗಳಿಗೆ ಹಣ ಹೊಂದಿಸುವ ಭರದಲ್ಲಿ ಮತ್ತು ರಾಜಸ್ವ ಸಂಗ್ರಹದಲ್ಲಿ ಹೆಚ್ಚಳ ಮಾಡುವ ತರಾತುರಿಯಲ್ಲಿ ಅಬಕಾರಿ, ಸ್ಟ್ಯಾಂಪಿಗ್, ದ್ವಿಚಕ್ರ ಮತ್ತು ಇತರ ವಾಣಿಜ್ಯ ವಾಹನಗಳ ಮೇಲಿನ ತೆರಿಗೆ ಏರಿಕೆ ಮಾಡಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಬಜೆಟ್ ಮಂಡಿಸಿದ್ದಾರೆ.
ಎಂದು ದ.ಕ ಜಿಲ್ಲೆಯ ಡಿವೈಎಫ್ಐನ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ತಿಳಿಸಿದ್ದಾರೆ