ದೇರಳಕಟ್ಟೆ: ಯೆನೆಪೋಯ ಕಿಡ್ನಿಟೆಕ್ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ
ದೇರಳಕಟ್ಟೆ: ಯೆನೆಪೋಯ ಪರಿಗಣಿತ ವಿ.ವಿ.ಯ ಯೆನೆಪೊಯ ಸ್ಕೂಲ್ ಆಫ್ ಅಲೈಡ್ ಸೈನ್ಸ್ ಆಶ್ರಯದಲ್ಲಿ ರೀನಲ್ ಡಯಾಲಿಸಿಸ್ ಸಂಯೋಜಿಸಿದ ಕಿಡ್ನಿಟೆಕ್ ಕಾನ್ಫರೆನ್ಸ್ ರಾಷ್ಟ್ರಮಟ್ಟದ ಕಾರ್ಯಗಾರ ಯೆನೆಪೋಯ ಎಂಡಿಯೆರನ್ಸ್ ಸಭಾಂಗಣದಲ್ಲಿ ನಡೆಯಿತು.
ಭಾರತದ ಪ್ರಮುಖ ಡಯಾಲಿಸಿಸ್ ಸೇವಾ ಪೂರೈಕೆದಾರರಾದ ನೆಪ್ರೋಪ್ಲಸ್ ಸಹ- ಸಂಸ್ಥಾಪಕರಾದ ಕಮಲ್ ಡಿ ಶಾ ಕಿಡ್ನಿಟೆಕ್ ಕಾನ್ಫರೆನ್ಸ್ ರಾಷ್ಟ್ರಮಟ್ಟದ ಕಾರ್ಯಗಾರ ಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ಮೂತ್ರಪಿಂಡದ ವೈಫಲ್ಯಕ್ಕೆ ಡಯಾಲಿಸಿಸ್ ನಿರ್ಣಾಯಕ ಮಧ್ಯಸ್ಥಿಕೆಯನ್ನು ಪ್ರತಿನಿಧಿಸುವುದರೊಂದಿಗೆ, ಡಯಾಲಿಸಿಸ್ ಅಭ್ಯಾಸಗಳನ್ನು ಮರುವ್ಯಾಖ್ಯಾನಿಸಲು ಸನ್ನಿಹಿತವಾದ ತಾಂತ್ರಿಕ ಪ್ರಗತಿಗಳ ಮೇಲೆ ಗಮನ ಅಗತ್ಯಎಂದು ಅಬಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಕುಲಪತಿ ಡಾ.ಯೆನೆಪೊಯ ಅಬ್ದುಲ್ಲ ಕುಂಞಿ ಮಾತನಾಡಿ, ಡಯಾಲಿಸಿಸ್ ತಂತ್ರಜ್ಞಾನ ಹಾಗೂ ಆರೋಗ್ಯ ಚಿಕಿತ್ಸೆ ವಿಭಾಗದಲ್ಲಿ ನೆಪ್ರೋಪ್ಲಸ್ ಸಂಸ್ಥೆ ಸ್ಪೂರ್ತಿದಾಯಕ. ಯೆನೆಪೋಯ ವಿ.ವಿಯೂ ಸಂಸ್ಥೆ ಜೊತೆಗೆ ಒಡಂಬಡಿಕೆಯ ಯೋಜನೆಯನ್ನು ಹಮ್ಮಿಕೊಂಡಿದ್ದು, ಉತ್ತಮ ಗುಣಮಟ್ಟದ ಆರೋಗ್ಯ ಚಿಕಿತ್ಸೆ ಪೂರೈಕೆ, ಕಿಡ್ನಿ ಸಂಬಂಧಿತ ಕಾಯಿಲೆಗಳ ಅರಿವು ಜಾಗೃತಿಗಳು ಸಮ್ಮೇಳನದಿಂದ ದೊರಕಲಿ ಎಂದು ಹಾರೈಸಿದರು.
ಉಪಕುಲಪತಿ ಡಾ. ವಿಜಯಕುಮಾರ್ ಎಂ ಮತ್ತು ಪ್ರೊ ಉಪಕುಲಪತಿ ಡಾ. ಬಿ ಎಚ್ ಶ್ರೀಪತಿ ರಾವ್, ಕುಲಸಚಿವರಾದ ಡಾ.ಗಂಗಾಧರ ಸೋಮಯಾಜಿ ಕೆ ಎಸ್, ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ಮೂಸಬ್ಬ, ಯೆನೆಪೊಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ.ಸುನೀತಾ ಸಾಲ್ಯಾನ್ನ, ನೆಫಾಲಜಿ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಪೈ ಬಿ.ಹೆಚ್. ಡಾ. ಮುಜೀಬುರಹಿಮಾನ್ ಎಂ. ವಿಭಾಗದ ಮುಖ್ಯಸ್ಥರು, ಮೂತ್ರಶಾಸ್ತ್ರ, ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಉಪಸ್ಥಿತರಿದ್ದರು.
ಡಯಾಲಿಸಿಸ್ ಕ್ಷೇತ್ರಕ್ಕೆ ಕಮಲ್ ಡಿ ಷಾ, ಅವರ ಮಹತ್ವದ ಕೊಡುಗೆಗಳ ಸ್ಮರಿಸಿ ಸನ್ಮಾನಿಸಲಾಯಿತು. ಜೊತೆಗೆ ಮೂತ್ರಪಿಂಡ ದಾನದ ಮೂಲಕ ಕಾಯಿಲೆಗಳ ಹೊರೆಯನ್ನು ಕಡಿಮೆ ಮಾಡುವಲ್ಲಿ ಅಮೂಲ್ಯ ಪಾತ್ರ ವಹಿಸಿದ ದಾನಿಗಳನ್ನು ಅಭಿನಂದಿಸಲಾಯಿತು.