ಜ. 2 : ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಪುಷ್ಪಯಾಗ

ಮಂಗಳೂರು: “ವೈಕುಂಠ ಏಕಾದಶಿಯ ಪ್ರಯುಕ್ತ ಜನವರಿ 2ರಂದು ಸೋಮವಾರ ಡೊಂಗರಕೇರಿ ವೆಂಕಟರಮಣ ದೇವರ ಸಾನಿಧ್ಯದಲ್ಲಿ ಚೈತನ್ಯಾಭಿವೃದ್ಧಿ ಹಾಗೂ ಲೋಕಕಲ್ಯಾಣ ಪ್ರಾಪ್ತಿಯ ಸಂಕಲ್ಪದೊಂದಿಗೆ ನಾಮತಯ ಮಹಾಮಂತ್ರ ಜಪಯಜ್ಞ ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆಯನ್ನು ದೇವರ ಪ್ರೇರಣೆಯಂತೆ ಮತ್ತು ಗುರುಗಳ ಮಾರ್ಗದರ್ಶನದೊಂದಿಗೆ ಹಮ್ಮಿಕೊಳ್ಳಲಾಗಿದೆ” ಎಂದು ದೇವಳದ ಆಡಳಿತ ಮೊಕ್ತೇಸರ ವರದರಾಜ್ ನಾಗ್ವೇಕರ್ ಮಾಹಿತಿ ನೀಡಿದರು.

ಅಂದು ಸಾಯಂಕಾಲ 4 ಘಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿರುವುದು. ಬೆಳಗ್ಗೆ ಸುಪ್ರಭಾತ ಸೇವೆ, ಸಾಮೂಹಿಕ ಪ್ರಾರ್ಥನೆ, ಅಷ್ಟಾಕ್ಷರೀ ಮಂತ್ರ ಜಪ, ಪ್ರಾತಃ ಪೂಜೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ “ನಾಮತ್ರಯ ಮಹಾಮಂತ್ರ ಜಪಯಜ್ಞ” ಮಹಾಪೂಜೆ, ಭಜನಾ ಕಾರ್ಯಕ್ರಮ, ವೈದಿಕರಿಂದ ವೇದ ಪಾರಾಯಣ ನಡೆಯಲಿದೆ. ನಾದಸಿರಿ ವಿಧುಷಿ ವಿಜಯಲಕ್ಷ್ಮೀ ರಘು ಶಿವಮೊಗ್ಗ ಇವರ ತಂಡದವರಿಂದ ವೀಣಾ ವಾದನ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ವರದರಾಜ್ ನಾಗ್ವೇಕರ್, ಸಹ ಮೊಕ್ತೇಸರ ವಿನಾಯಕ್ ಶೇಟ್, ಗಣೇಶ್ ನಾಗ್ವೇಕರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.