ಬಿಜೆಪಿಯನ್ನು ರಾಷ್ಟ್ರಮಟ್ಟಕ್ಕೇರಿಸಿದ ನಾಯಕ ಎಲ್. ಕೆ. ಅಡ್ವಾಣಿಯವರಿಗೆ ಭಾರತ ರತ್ನ

ರಥ ಯಾತ್ರೆಯ ಮೂಲಕ ಬಿಜೆಪಿಯನ್ನು ರಾಷ್ಟ್ರ ಮಟ್ಟಕ್ಕೆ ಏರಿಸಿದ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಸಲ್ಲುತ್ತಿರುವುದಾಗಿ ಇಂದು ಪ್ರಧಾನಿ ಮೋದಿಯವರು ಅಡ್ವಾಣಿಯವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ತಿಳಿಸಿದರು.
ರಾಮ ಮಂದಿರ ಹೋರಾಟದ ಮುಖ್ಯ ರೂವಾರಿಯಾಗಿದ್ದರು ಅಡ್ವಾಣಿ. 1977ರ ಜನತಾ ಸರಕಾರದಲ್ಲಿ ಮತ್ತು ವಾಜಪೇಯಿಯವರ ಸಂಪುಟದಲ್ಲಿ ಅಡ್ವಾಣಿಯವರು ಸಚಿವರಾಗಿದ್ದರು; ಉಪ ಪ್ರಧಾನಿ ಆಗಿದ್ದರು. ಆಗ ಮುಂದಿನ ಪ್ರಧಾನಿ ಅಡ್ವಾಣಿಯವರು ಎಂದು ಬಿಜೆಪಿಯಲ್ಲಿ ಸಹಜ ಮಾತುಕತೆ ಇತ್ತು. ಆದರೆ ಅದು ಆಗಲಿಲ್ಲ. ಅಲ್ಲದೆ ಅವರಿಗೆ ಪ್ರಾಯವೂ ಏರಿತು. ಈಗ ಅವರಿಗೆ 96 ವರುಷ. ಬಿಜೆಪಿಯನ್ನು ತಳ ಮಟ್ಟದಿಂದ ಕಟ್ಟಿದ ಜನಸಂಘ ಕಾಲದ ನಾಯಕರು ಅಡ್ವಾಣಿ.
ಕರಾಚಿಯಲ್ಲಿ ಜನಿಸಿದ್ದ ಅಡ್ವಾಣಿಯವರು ಸ್ವಾತಂತ್ರ್ಯಾನಂತರ ಮುಂಬಯಿಯಲ್ಲಿ ನೆಲೆಸಿದರು.1941 ರಿಂದಲೆ ಸಕ್ರಿಯ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು. 1970 ರಲ್ಲಿ ಮೊದಲ ಬಾರಿಗೆ ರಾಜ್ಯ ಸಭಾ ಸದಸ್ಯರಾಗಿ ಅಧಿಕಾರಿಗೆ ಅಡಿಯಿಟ್ಟರು. ಈಗ ಪ್ರಧಾನಿಯವರು ಅಡ್ವಾಣಿಯವರಿಗೆ ಭಾರತ ರತ್ನ ಖಚಿತಪಡಸಿದ್ದು, ಅದನ್ನು ದೇಶದ ಬಹತೇಕರು ಅದರಲ್ಲೂ ಸಂಘ ಪರಿವಾರದ ಹಿರಿಯರು ಸ್ವಾಗತಿಸಿದ್ದಾರೆ.

L.KAdvani

Related Posts

Leave a Reply

Your email address will not be published.