ರಾಜ್ಯದ ಜವಾಬ್ದಾರಿ ಮರೆತು ಕೇಂದ್ರವನ್ನು ದೂರಬೇಡಿ : ಕೋಟ ಶ್ರೀನಿವಾಸ್ ಪೂಜಾರಿ
ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ಕೇಂದ್ರ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ 10 ವರ್ಷಗಳ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಎನ್‌ಡಿಆರ್‌ಎಫ್ ಎಸ್‌ಡಿಆರ್‌ಎಫ್ ನಿಧಿ ಬಂದಿದೆ ಎಂದು ವಿಧಾನ ಪರಿಷತ್ತು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೋಟ ಸಿಎಂ ಸಿದ್ಧರಾಮಯ್ಯ ಮಾತುಗಳು ಜನರ ದಾರಿ ತಪ್ಪಿಸುತ್ತವೆ. ಹತ್ತು ವರ್ಷದಲ್ಲಿ ಯುಪಿಎ ರಾಜ್ಯಕ್ಕೆ 3233 ಕೋಟಿ ನೀಡಿದ್ದರೆ, ಎನ್ ಡಿಎ 11,603 ಕೋಟಿ ನೀಡಿದೆ. ಇದು ನಾಲ್ಕು ಪಟ್ಟು ಹೆಚ್ಚುವರಿ ಹಣ. ಎಸ್‌ಡಿಆರ್‌ಎಫ್ ಗೆ ಯುಪಿಎ 812 ಕೋಟಿ ಕೊಟ್ಟರೆ, ಎನ್‌ಡಿಎ 2552 ಕೋಟಿ ರಾಜ್ಯ ವಿಪತ್ತು ಸ್ಪಂದನಾ ನಿಧಿಗೆ ಬಿಡುಗಡೆ ಮಾಡಿದೆ. ಇದೂ ನಾಲ್ಕು ಪಟ್ಟು ಹೆಚ್ಚು ಹಣ ಎಂದರು. ರಾಜ್ಯದ ಜವಾಬ್ದಾರಿ ಮರೆತು ಕೇಂದ್ರವನ್ನು ದೂರಬೇಡಿ ಬೇಗ 10 ಸಾವಿರ ಕೋಟಿ ಬಿಡುಗಡೆ ಮಾಡಿ ಎಂದರು.