ಡಾ|ತುಂಬೆ ಮೊಯ್ದಿನ್ ಅವರಿಗೆ ಪೋಲಂಡ್‌ನ ಲ್ಯುಬ್ಲಿನ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್

ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಡಾ|ತುಂಬೆ ಮೊಯ್ದಿನ್ ಅವರಿಗೆ ಪೋಲಂಡ್‌ನ ಲ್ಯುಬ್ಲಿನ್ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿದೆ.
ಜಾಗತಿಕ ಆರೋಗ್ಯ ಸೇವೆ, ವ್ಯೆದ್ಯಕೀಯ ಶಿಕ್ಷಣ ಹಾಗೂ ಸಮುದಾಯ ಅಭಿವೃದ್ಧಿ ಉದ್ದೇಶದ ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಆಧರಿಸಿ ಈ ಗೌರವ ನೀಡಲಾಗಿದೆ.
ಇದು ಅವರಿಗೆ ಲಭಿಸುತ್ತಿರುವ ಐದನೇ ಗೌರವ ಡಾಕ್ಟರೇಟ್. ಸಮುದಾಯ ಪ್ರಗತಿಗೆ ಡಾ|ಮೊಯ್ದಿನ್ ಅವರ ಪ್ರಯತ್ನ ಮತ್ತು ಅದಕ್ಕಾಗಿ ತುಂಬೆ ಇಂಟರ್‌ನ್ಯಾಷನಲ್ ರಿಸರ್ಚ್ ಗ್ರಾಂಟ್ ಮೂಲಕ 3 ಮಿಲಿಯನ್ ಎಇಡಿ ಮೊತ್ತದ ನಿಧಿ ಸ್ಥಾಪನೆಯನ್ನು ಲುಬ್ಲಿನ್ ವಿವಿ ಗುರುತಿಸಿದೆ,.
ಈ ವೇಳೆ ಮಾತನಾಡಿದ ಡಾ|ಮೊಯ್ದಿನ್, ನಾನು ಎಷ್ಟು ದೂರ ಸಾಗಿದ್ದೇನೆ ಎನ್ನುವುದು ಮುಖ್ಯವಲ್ಲ, ಬದಲಿಗೆ ಎಷ್ಟು ಮಂದಿಯನ್ನು ನನ್ನೊಂದಿಗೆ ಕರೆದೊಯ್ದಿದ್ದೇನೆ ಎಂಬುದು ಮುಖ್ಯ. ನಮ್ಮ ಕಾರ್‍ಯದಿಂದಾಗಿ ಇತರರು ಕನಸು ಕಾಣುವುದು, ಪ್ರಗತಿ ಹೊಂದುವುದು ಸಾಧ್ಯವಾಗಿದ್ದರೆ, ಅದನ್ನು ನಾನು ಯಶಸ್ಸೆಂದು ಕರೆಯುತ್ತೇನೆ. ಹಿಂದುಳಿದವರನ್ನು ಸಶಕ್ತರನ್ನಾಗಿ ಮಾಡುವ ಶಕ್ತಿಯಾಗಿ ತುಂಬೆ ಸಮೂಹವನ್ನು ಗುರುತಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.
ಗಲ್ಫ್ ಮೆಡಿಕಲ್ ಕಾಲೇಜಿನಿಂದ ಆಸ್ಪತ್ರೆವರೆಗೆ, ಲ್ಯಾಬ್‌ಗಳು ರಿಹ್ಯಾಬಿಲಿ ಟೇಶನ್ ಕೇಂದ್ರಗಳು, ಎಐ ಆಧರಿತ ಸಂಶೋಧನ ಕಾರ್ಯಕ್ರಮಗಳ ಮೂಲಕ ಸಮೂಹವು ಆರೋಗ್ಯ ಸೇವಾ ಕ್ಷೇತ್ರದ ಭವಿಷ್ಯವನ್ನು ಮರುವ್ಯಾಖ್ಯಾನಿಸಬಯಸುತ್ತಿದೆ .
