ದುಬೈನಲ್ಲಿ ಈ-ಮಣ್ಣು ಚಲನಚಿತ್ರ ಪ್ರದರ್ಶನ
ಈ-ಮಣ್ಣು ಚಲನ ಚಿತ್ರವನ್ನು ದುಬೈನ ಗಲೇರಿಯಾ ಚಿತ್ರಮಂದಿರದಲ್ಲಿ ವಿಶೇಷ ಅತಿಥಿಗಳನ್ನು ಆಹ್ವಾನಿಸಿ ಪ್ರದರ್ಶಿಸಿದ್ದು, ಯು.ಎ.ಇ.ಕನ್ನಡಿಗರಲ್ಲಿ ಸಡಗರ ಮೂಡಿಸಿತ್ತು. ಹೃದಯ ಸ್ವರ್ಶಿ ಮತ್ತು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಈ ಚಲನಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶಿವಧ್ವಜ್ ಶೆಟ್ಟಿ ನಿರ್ದೇಶಿಸಿದ್ದು, ದುಬೈನ ಅನಿವಾಸಿ ಕನ್ನಡಿಗ ಈಶ್ವರಿದಾಸ್ ಶೆಟ್ಟಿ ನಿರ್ಮಿಸಿದ್ದಾರೆ. ಈ ಚಲನಚಿತ್ರದ ಕನ್ನಡ ಭಾಷೆ ಮತ್ತು ಲಾಭ ರಹಿತ ಪ್ರದರ್ಶನಕ್ಕೆ ಮುಂದಾದ ನಿರ್ಮಾಪಕರಿಗೆ ನೆರವಾಗಲೆಂದು ಚಲನಚಿತ್ರಕ್ಕೆ “ಕನ್ನಡ ಶಾಲೆ ದುಬೈ” ತಂಡ ಸಂಪೂರ್ಣ ಸಹಕಾರ ನೀಡಿ ಚತ್ರದ ಯಶಸ್ಸಿಗೆ ಶ್ರಮಿಸಿದರು.
ಅತಿಥಿಗಳಾಗಿ ಚಂದನವನದ ಹೆಸರಾಂತ ಸಾಹಿತಿ ಮತ್ತು ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್, ರಾಷ್ಟ್ರ ಪ್ರಶಸ್ತಿ ವಿಜೇತ ಶಿವಧ್ವಜ್ ಶೆಟ್ಟಿ, ಚಿತ್ರದ ಸಹ ಕಲಾವಿದ ಮತ್ತು ಪ್ರಮುಖ ಪಾತ್ರದಾರಿ ಚಂದ್ರಕಾಂತ್ ಉಳ್ಳಾಲ್, ಉದ್ಯಮಿ ಮತ್ತು ನಿರ್ಮಾಪಕ ಅಡ್ಯಾರ್ ಮಾಧವ್ ನಾಯಕ್ ತಾಯ್ನಡಿನಿಂದ ಆಗಮಿಸಿದ್ದರು.
ಚಲನಚಿತ್ರವನ್ನು ದುಬೈನಲ್ಲಿ ಅಧಿಕೃತವಾಗಿ ಸ್ಥಾಪಿಸಲಾದ ಕನ್ನಡಿಗರ ಒಡೆತನದ ಸಂಸ್ಥೆ ಓಎಂಜಿ (ಓವರ್ಸೀಸ್ ಮೂವೀಸ್ ಗಲ್ಫ್ )ಮೂಲಕ ವಿತರಣೆ ಮಾಡಲಾಯಿತು. ಓಎಂಜಿ ಯ ನಾಲ್ಕು ಸಂಸ್ಥಾಪಕರುಗಳಾದ ಮಲ್ಲಿಕಾರ್ಜುನ ಗೌಡ, ಈಶ್ವರಿದಾಸ್ ಶೆಟ್ಟಿ ಮತ್ತು ಶಶಿಧರ್ ನಾಗರಾಜಪ್ಪ ಅತಿಥಿಗಳ ಹಸ್ತದಿಂದ ಸಂಸ್ಥೆಯ ಚಿನ್ಹೆಯನ್ನು ಅನಾವರಣಗೊಳಿಸಿದರು.
ಚಿನ್ಹೆ ಅನಾವರಣಗೊಳಿಸಿದ ದುಬೈನ ಉದ್ಯಮಿ ,ಮತ್ತು ಚಿತ್ರ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಮತ್ತು ಚಂದನವನದ ಹೆಸರಾಂತ ಸಾಹಿತಿ ಮತ್ತು ನಿರ್ದೇಶಕ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಓಎಂಜಿ ತಂಡಕ್ಕೆ ಶುಭ ಕೋರಿದರು
ಇದೇ ಸಂದರ್ಭದಲ್ಲಿ ಯು.ಎ.ಇ ಕನ್ನಡಿಗರ ಮಹಾ ಪೊಷಕರುಗಳಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಶ್ರೀ ಸರ್ವೋತ್ತಮ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಲನಚಿತ್ರದ ಎಲ್ಲಾ ಟಿಕೆಟ್ ಮಾರಾಟವಾಗಿ ಚಿತ್ರಮಂದಿರ ತುಂಬಿದಮನೆ ಪ್ರದರ್ಶನ ಕಂಡಿತು.ಚಲನಚಿತ್ರದ ಅಂತ್ಯದ ಒಂದು ಘಂಟೆ ಕಾಲ ಭಾರತ ಮತ್ತು ಪಾಕಿಸ್ತಾನ್ ಕ್ರಿಕೆಟ್ ಪಂದ್ಯದ ಸಮಯಕ್ಕೆ ವಿಲೀನವಾದರೂ ಕನ್ನಡ ಚಿತ್ರಪ್ರೇಮಿಗಳು ಖುಶಿಯಿಂದ ಚಿತ್ರನೋಡಲು ಮೈಮರೆತಿದ್ದು ಎಲ್ಲರನ್ನು ವಿಸ್ಮಯಗೊಳಿಸಿತು. ಚಿತ್ರ ವೀಕ್ಷಿಸಲು ದೇಶದ ವಿವಿದ ಭಾಗಗಳಿಂದ ಆಗಮಿಸಿದ್ದ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳನ್ನು ಪರದೆಯ ಮುಂಭಾಗಕ್ಕೆ ಅಹ್ವಾನಿಸಿ ಸೂಚಿಸಲಾಯಿತು.
ದುಬೈನಲ್ಲಿ ಆರಂಭವಾಗಿರುವ ನೂತನ ರೇಡಿಯೋ ಚಾನಲ್ “ಖುಶಿ 92.2 ಎಫ್ ಎಂ “ ನ ಬಾಲ ಸುಬ್ರಮಣ್ಯಂ, ಕನ್ನಡ ನಿರೂಪಕಿ ಕುಮಾರಿ ಕೃತಿಕ (ಆರ್ ಜೆ) ಮತ್ತು ಭರತ್ ಆಗಮಿಸಿ ಕನ್ನಡಿಗರ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು.ಚಲನಚಿತ್ರ ಪ್ರದರ್ಶನಕ್ಕೆ ಸಹಪ್ರಾಯೋಜಕರಾದ “ಪ್ರಾವಿಡೆಂಟ್ ಹೌಸಿಂಗ್” ಪರತಿನಿಧಿ ಮತನಾಡಿ ತಮ್ಮ ಮಂಗಳೂರಿನ ಗೃಹ ಸಮುಚ್ಛಯದ ವಿವರ ನೀಡಿದರು. ಈ ಯಶಸ್ವಿ ಪ್ರದರ್ಶನಕ್ಕೆ ಅವಿರತವಾಗಿ ಶ್ರಮಿಸಿದ ಶ್ರೀ ಸೆಂಥಿಲ್ ರವರಿಗೆ ಅತಿಥಿಗಳಿಂದ ಶಾಲು ಹೊದಿಸಿ ಗೌರವಿಸಲಾಯಿತು.ಕನ್ನಡ ಚಲನಚಿತ್ರ ಪ್ರೇಮಿಗಳು ಮತ್ತು ಓಎಂಜಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಶಿಲ್ವಾ ಸಧಾಕರ್, ಶ್ರೀಮತಿ ಮಮತ, ಸುನೀಲ್ ಗವಾಸ್ಕರ್,ಸಿದ್ದಲಿಂಗೇಶ್, ಫಿರೋಜ್ ,ನವೀನ್ ಭರದ್ವಾಜ್.ಅನ್ಸಾರ್,ನಾಗರಾಜ್ ರಾವ್, ಎರ್ರೂಲ್.ಸಂತೋಷ್.ಎ ಅಬ್ರಹಾಂ ಸನ್ನಿ,ಹಿದಾಯತ್ ಅಡ್ಡುರು,ಹರೀಶ್ ಕೋಡಿ,ಶಂಕರ್,ಮಹಾದೇವ್, ಇಮ್ರಾನ್ , ಕೋಟ್ರೇಶ್ ರವರಿಗೆ ತಮ್ಮ ಸಹಾಯ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದ ಕೋರಲಾಯಿತು.