ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೀಬಿಲಚ್ಚಿಲ್ : 108 ದಿನದ ಸಂಧ್ಯಾ ಭಜನಾ ಸಂಕೀರ್ತನೆ

ಮಂಗಳೂರು ತಾಲೂಕಿನ ಅದ್ಯಪಾಡಿ ಬೈಲು ಮಾಗಣೆಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೀಬಿಲಚ್ಚಿಲ್ ಇಲ್ಲಿ ನಡೆಯಲಿರುವ ಬ್ರಹ್ಮಲಕಶೋತ್ಸವ ಹಾಗೂ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ಅಕ್ಟೋಬರ್ 17ರಿಂದ 2023 ಜನವರಿ 31ರ ವರೆಗೆ 108 ದಿನದ ಸಂಧ್ಯಾ ಭಜನಾ ಸಂಕೀರ್ತನೆ ನಡೆಯಲಿದೆ.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 2023ರ ಫೆಬ್ರವರಿ 1ರಿಂದ ಸೂರ್ಯೋದಯದಿಂದ ಫೆಬ್ರವರಿ 2, 2023ರ ಸೂರ್ಯೋದಯದವರೆಗೆ ಏಕಹಾ ಭಜನಾ ಮಂಗಳೋತ್ಸವ ನಡೆಯಲಿದೆ. ನಿನ್ನೆಯಿಂದ ಮೊದಲ್ಗೊಂಡು 108 ದಿನಗಳ ವರೆಗೆ ಭಜನೆ ನಡೆಯಲಿದೆ. ನಿನ್ನೆಯ ದಿನ ಶ್ರೀ ದುರ್ಗಾಪರಮೇಶ್ವರಿ ಕುಣಿತ ಭಜನಾ ಮಂಡಳಿ ಬೀಬಿಲಚ್ಚಿಲ್ ಅದ್ಯಪಾಡಿ ಅವರಿಂದ ಭಜನಾ ಸಂಕೀರ್ತನ ಸೇವೆ ನಡೆಯಿತು.

ಮತ್ತು ಇಂದಿನಭಜನಾ ಸಂಕೀರ್ತನ ಸೇವೆ (18-10-2022) ಶ್ರೀ ಕುಲಾಲ ಮಹಿಳಾ ವೇದಿಕೆ ಕುಳಾಯಿ ಸುರತ್ನಕಲ್ ಇವರಿಂದ ಜರಗಲಿದೆ.ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾತ್ರವಲ್ಲದೆ ಈ ಭಜನಾ ಕಾರ್ಯಕ್ರಮದಲ್ಲಿ ಭಜನಾ ತಂಡಗಳು ಪಾಲ್ಗೊಳ್ಳುವಂತೆ ಶ್ರೀ ದುರ್ಗಾಪರಮೇಶ್ವರ ಭಜನಾ ಮಂಡಳಿ ಬೀಬಿಲಚ್ಚಿಲ್ ಅವರು ಮನವಿಯನ್ನು ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಬೀಬಿಲಚ್ಚಿಲ್ ಆಡಳಿತ ಮೊಕ್ತೇಸರರಾದ ಮೋನಪ್ಪ ಮೇಸ್ತ್ರಿ, ಶ್ರೀ ಕ್ಷೇತ್ರ ಬೀಬಿಲಚ್ಚಿಲ್‍ನ ಹರಿರಾಮ ಸಂಕೀರ್ತನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀ ಕ್ಷೇತ್ರ ಬೀಬಿಲಚ್ಚಿಲ್ ಬ್ರಹ್ಮಕಲಶೋತ್ಸವ ಸಮಿತಿ ನಾಗಮಂಡಲ ಸಮಿತಿ, ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಸರ್ವಸದಸ್ಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ .

ಹೆಚ್ಚಿನ ಮಾಹಿತಿಗಾಗಿ ರಾಜೇಶ್ ಅವರ 9880054343 ಅವರ ಮುಖೇನ ನೋಂದಣಿ ಮಾಡಿಕೊಳ್ಳಬಹುದು.

Related Posts

Leave a Reply

Your email address will not be published.