ಭಾರತ್ ಬೀಡಿ ವರ್ಕ್ಸ್ ಸಂಸ್ಥೆಯ ಸ್ಥಾಪನಾ ದಿನಾಚರಣೆ
ಮಂಗಳೂರು: ಹೆಸರಾಂತ 30 ಮಾರ್ಕಿನ ಬೀಡಿಗಳ ತಯಾರಕರಾದ. ಭಾರತ್ ಬೀಡಿ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಇದರ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ರವಿವಾರ ಕದ್ರಿ ಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಪೈ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕ ಆನಂದ್ ಜಿ. ಪೈ ಸ್ವಾಗತಿಸಿ ಪ್ರಸ್ತಾವನೆಗೈದು ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು. ಇನ್ನೋರ್ವ ನಿರ್ದೇಶಕ ಸುಬ್ರಾಯ ಎಂ. ಪೈ ಅವರು ವರ್ಕ್ ಫ್ರಮ್ ಹೋಮ್ ಪರಿಕಲ್ಪನೆಯನ್ನು 93 ವರ್ಷಗಳ ಹಿಂದೆಯೇ ಸ್ಥಾಪಕರಾದ ಮಂಜುನಾಥ ಪೈ ಅವರು ಅನುಷ್ಟಾನ ಮಾಡಿದ್ದರು ಎಂದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ನಾಗೇಂದ್ರ ಡಿ ಪೈ, ವೆಂಕಟೇಶ ಎಂ. ಪೈ, ಅಂತಾರಾಷ್ಟ್ರೀಯ ವ್ಯವಹಾರ ಸಂಬಂಧಗಳ ಅಧಿಕಾರಿ ಅಭಿಷೇಕ್ ಎನ್. ಪೈ ಅವರು ವೇದಿಕೆಯಲ್ಲಿದ್ದರು.
ವಿವಿಧ ಬ್ಯಾಂಕುಗಳ ಅಧಿಕಾರಿಗಳು ಮತ್ತು ಸಂಸ್ಥೆಯ ಮ್ಯಾನೇಜರ್ ಗಳು ಮುಖ್ಯ ಅತಿಥಿಗಳಾಗಿದ್ದರು. ಕೆನರಾ ಬ್ಯಾಂಕಿನ ಜಿ.ಎಂ. ಸುಧಾಕರ್ ಕೊಟ್ಟಾರಿ, ಯೂನಿಯನ್ ಬ್ಯಾಂಕ್ ಎಜಿಎಂ ವಿಷು ಕುಮಾರ್, ಐಸಿಐಸಿಐ ಬ್ಯಾಂಕಿನ ಜೋನಲ್ ಮ್ಯಾನೇಜರ್ ಅಭಿತಾಬ್ ದೀಕ್ಷಿತ್ ಅವರು ಭಾರತ್ ಬೀಡಿ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ನಿರ್ದೇಶಕ ಸುಧೀರ್ ಎಂ. ಪೈ ವಂದಿಸಿದರು. ಸಂಸ್ತೆಯ ಲೆಕ್ಕ ಪರಿಶೋಧಕ ಸಿ.ಎ. ಶಿವಾನಂದ ಪೈ, ಹಿರಿಯ ಅಧಿಕಾರಿಗಳಾದ ರಮೇಶ್ ಶೆಣೈ, ರಮೇಶ್ ಪೈ, ಖ್ಯಾತ ಹೃದಯ ರೋಗ ತಜ್ಞ ಕ್ಯಾಪ್ಟನ್ ಡಾ. ಪದ್ಮನಾಭ ಕಾಮತ್ ಮುಂತಾದವರು ಉಪಸ್ಥಿತರಿತದ್ದರು.