ಗೊಳಿತೊಟ್ಟು: ದ್ವಿಚಕ್ರ ವಾಹನಗಳ ಅಪಘಾತ: ಮೂವರಿಗೆ ಗಂಭೀರ ಗಾಯ
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು ಮಂಗಳೂರು ಮಧ್ಯೆ ಗೊಳಿತೊಟ್ಟು ಸಮೀಪದ ಶಿರಾಡಿ ಗುಡ್ಡೆ ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿ ಮೂರು ಮಂದಿ ಗಂಭೀರ ಗಾಯಗೊಂಡ ಘಟನೆ ಮಾ.30ರ ರಾತ್ರಿ ಸಂಭವಿಸಿದೆ.
ಗಾಯಗೊಂಡವರನ್ನು ಕೊಕ್ಕಡದ ರಜನೀಶ್, ಗಗನ್ ಹಾಗೂ ಗೊಳಿತೊಟ್ಟು ನ ವಿನಯ್ ಎಂದು ಗುರುತಿಸಲಾಗಿದೆ. ವಿನಯ್ ಎಂಬವರು ಸಣ್ಣಂಪಾಡಿಯಿಂದ ಗೊಳಿತೊಟ್ಟು ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಕೊಕ್ಕಡದಿಂದ ಉಪ್ಪಿನಂಗಡಿಯಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ಕೊಕ್ಕಡ ರಜನೀಶ್ , ಗಗನ್ ಪ್ರಯಾಣಿಸುತ್ತಿದ್ದ ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿದೆ. ಗಾಯಗೊಂಡ ಮೂವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.