ಮೇ 18ರಂದು ಕರಾವಳಿಯಾದ್ಯಂತ ಬಹುನಿರೀಕ್ಷಿತ ಗೋಸ್ಮರಿ ಫ್ಯಾಮಿಲಿ ತುಳು ಸಿನಿಮಾ ಬಿಡುಗಡೆ
ಯೋಧ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಕೃಷ್ಣ ಕುಡ್ಲ ಅವರು ಬರೆದು ನಿರ್ದೇಶಿಸಿರುವ ತುಳು ಚಿತ್ರ `ಗೋಸ್ಮರಿ ಫ್ಯಾಮಿಲಿ’ ಮೇ 18 ರಂದು ಬಿಡುಗಡೆಯಾಗಲಿದೆ.
ಬಹುನಿರೀಕ್ಷಿತ ತುಳು ಸಿನಿಮಾ ಗೋಸ್ಮರಿ ಫ್ಯಾಮಿಲಿ ಬಿಡುಗಡೆಗೆ ಸಿದ್ಧಗೊಂಡಿದೆ. ಒಂದು ಅದ್ಭುತ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಮೇ 18ರಂದು ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲಿದೆ. ಅದಕ್ಕಾಗಿ ಚಿತ್ರತಂಡ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಚಿತ್ರವನ್ನು ಶಕುಂತಲಾ ಆಂಚನ್ ನಿರ್ಮಿಸಿದ್ದಾರೆ, ಪಿಎಲ್ ರವಿ ಅವರ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ, ಆಕಾಶ್ ಪ್ರಜಾಪತಿ ಸಂಗೀತ ಸಂಯೋಜಿಸಿದ್ದಾರೆ ಮತ್ತು ಸುಜಿತ್ ನಾಯಕ್ ಮತ್ತು ಸುಮಿತ್ ಪರ್ನಾಮಿ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ., ಸಹ ನಿರ್ಮಾಪಕರಾಗಿ ಚಿರಾಗ್ ಆರೂರ ಕಾರ್ಯನಿರ್ವಹಿಸಿದ್ದಾರೆ. ಶಶಿರಾಜ್ ರಾವ್ ಕಾವೂರು ಮತ್ತು ಕೀರ್ತನ್ ಭಂಡಾರಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಸಾಹಸ ಮಾಸ್ ಮಾದ, ಕ್ರಿಯೇಟಿವ್ ಪ್ರೋಡ್ಯೂಸರ್ ಆಗಿ ಸೂರ್ಯ ಮೆನನ್, ನಿರ್ಮಾಣ ನಿರ್ವಹಣೆ ಸತೀಶ್ ಬ್ರಹ್ಮಾವರ, ಕಲೆ ವರದರಾಜ್ ಕಾಮತ್ ಅವರು ಸಹಕರಿಸಿದ್ದಾರೆ‘ಗೋಸ್ಮರಿ ಫ್ಯಾಮಿಲಿ’ ಚಿತ್ರದಲ್ಲಿ ಅರ್ಜುನ್ ಕಾಪಿಕಾಡ್ ಮತ್ತು ಸಮತಾ ಅಮೀನ್ ಮುಖ್ಯ ಭೂಮಿಕೆಯಲ್ಲಿದ್ದಾರೆ, ಜೊತೆಗೆ ತುಳುನಾಡಿನ ಹಾಸ್ಯ ದಿಗ್ಗಜರಾದ ಡಾ.ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮತ್ತು ಉಮೇಶ್ ಮಿಜಾರ್ ನಟಿಸಿದ್ದಾರೆ. ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮಾಣಿಬೆಟ್ಟು ಮತ್ತಿತರರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.