ಹಳೆಯಂಗಡಿ : ರೈಲ್ವೇ ಗೇಟ್‍ನಲ್ಲಿಯೇ ಉಳಿದ ಗೂಡ್ಸ್ ಡಬ್ಬಿಗಳು
ಮೂಲ್ಕಿಯ ಹಳೆಯಂಗಡಿ ಇಂದಿರಾನಗರದ ರೈಲ್ವೇ ಗೇಟ್‍ನ ಬಳಿಯಲ್ಲಿಯೇ ಸಂಚರಿಸುತ್ತಿದ್ದ ಗೂಡ್ಸ್ ರೈಲು ಬೋಗಿಯ ಡಬ್ಬಿಗಳು ಅರ್ಧದಲ್ಲಿಯೇ ಕಡಿದುಕೊಂಡು ನಿಂತು ಸುಮಾರು ಒಂದು ತಾಸು ರೈಲ್ವೇ ಗೇಟ್‍ನಲ್ಲಿ ಸಂಚಾರಿಗಳು ಪರದಾಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಪಡುಬಿದ್ರಿಯಿಂದ ಮಂಗಳೂರಿನ ಎನ್‍ಎಂಪಿಟಿಯತ್ತ ತೆರಳುತ್ತಿದ್ದ ಗೂಡ್ಸ್ ಹೊತ್ತಿದ್ದ ಬೋಗಿಯೂ ತಾಂತ್ರಿಕ ದೋಷದಿಂದ ಬೋಗಿಯನ್ನು ಹೊಂದುಕೊಂಡಿದ್ದ ಗೂಡ್ಸ್ ಡಬ್ಬಿಗಳ ಹಾಗೂ ಇಂಜಿನ್‍ನ ನಡುವೆ ಸಂಪರ್ಕ ಕಡಿದುಕೊಂಡು ರೈಲ್ವೇ ಗೇಟ್‍ನ ಬಳಿಯಲ್ಲಿ ನಿಂತಿತು. ಇದರಿಂದ ಗೇಟ್ ಸಹ ತೆರವುಗೊಳ್ಳದೇ ಇದ್ದುದರಿಂದ ನೂರಾರು ವಾಹನಗಳು ಎರಡೂ ಬದಿಯಲ್ಲಿ ಸುಮಾರು ಒಂದು ತಾಸು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು. ಸುಮಾರು ಎರಡು ಕಿಲೋಮೀಟರ್ ಇಂಜಿನ್ ಚಲಿಸಿದ್ದು ನಂತರ ಸುರತ್ಕಲ್‍ನಿಂದ ತಾಂತ್ರಿಕ ತಜ್ಞರು ಬಂದು ದುರಸ್ಥಿಗೊಳಿಸಿ ಗೂಡ್ಸ್ ರೈಲು ಸಂಚಿರಿಸಿತು. ಕೆಲವು ವಾಹನಗಳ ಸವಾರರು ಕೊಪ್ಪಳ ಹಾಗೂ ಪಡುಪಣಂಬೂರು-ತೋಕೂರು ರಸ್ತೆಯಾಗಿ ತೆರಳಿದರು.