ಹಾಸನ: ಕರ್ನಾಟನ ಬಂದ್‍ಗೆ ನಮ್ಮ ಬೆಂಬಲ ಇದೆ: ಶಾಸಕ ಸಿಮೆಂಟ್ ಮಂಜು

ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಹೇಳಿದರು. ಅವರು ಹಾಸನದಲ್ಲಿ ಮಾತನಾಡಿ, ಆಡಳಿತರೂಡ ಸರ್ಕಾರ ವಕೀಲರನ್ನು ಇಟ್ಟು ವಾದ ಮಾಡುವಲ್ಲಿ ವಿಫಲವಾಗಿದೆ. ನಮ್ಮ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ. ನಮಗೆ ನೀರಿಲ್ಲದಿರುವಾಗ ಪರರಿಗೆ ನೀರು ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.
