ಹಾಸನ: ನ.2ರಿಂದ ಹಾಸನಾಂಬೆ ಜಾತ್ರಾ ಮಹೋತ್ಸವ: ಐಜಿ ಡಾ. ಬೋರಲಿಂಗಯ್ಯ ಭೇಟಿ, ಪರಿಶೀಲನೆ

ಹಾಸನ: ನವೆಂಬರ್ 2ರಿಂದ ಆರಂಭವಾಗುವ ಹಾಸನಾಂಬೆ ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಐಜಿ ಡಾ. ಬೋರಲಿಂಗಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

       ಹಾಸನ ಜಿಲ್ಲೆಯ ಡಿಸಿ ಸಿ. ಸತ್ಯಭಾಮ ಮತ್ತು ಎಸ್ಪಿ ಮಹಮದ್ ಸುಜೀತಾ ಹಾಗೂ ಉಪವಿಭಾಗಧಿಕಾರಿ ಮಾರುತಿ ಅವರಿಂದ ಮಾಹಿತಿ ಪಡೆದ ಮೈಸೂರು ದಕ್ಷಿಣ ವಲಯ .ಜಿ ಅವರು, ದೇವಸ್ಥಾನದ ಸರತಿ ಸಾಲು, ವಾಹನಗಳ ಪಾರ್ಕಿಂಗ್, ಭಕ್ತರು ಬಂದು ಹೋಗುವ ಸ್ಥಳ ಸೇರಿದಂತೆ ಇತರೆ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದರು. ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವ ಬಂದ್ ಬಸ್ತುಗೆ 1200 ಕ್ಕೂ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ಹೊರ ಜಿಲ್ಲೆಯಿಂದಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿಯೋಜನೆ ಮಾಡಲು ನಿರ್ಧರಿಸಿದರು. ಮೂರು ಪಾಳಯದಲ್ಲಿ ಸೇವೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವುದಾಗಿ ಹೇಳಿದರು.

Related Posts

Leave a Reply

Your email address will not be published.