ಪಾದೆಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಡುಬಿದ್ರಿ ಇನ್ನರ್ ವೀಲ್ ವತಿಯಿಂದ ಪುಸ್ತಕ ವಿತರಣೆ
ಪಡುಬಿದ್ರಿಯ ಪಾದೆಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲಾ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪಡುಬಿದ್ರಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಉಚಿತವಾಗಿ ನೋಟ್ ಬುಕ್ ವಿತರಿಸಲಾಯಿತು. ಪುಸ್ತಕ ವಿತರಿಸಿ ಮಾತನಾಡಿದ ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿಮಲ ಕೆ. ಸಾಲ್ಯಾನ್, ಕೊರೋನಾ ರೋಗದ ಬಳಿಕ ಜೀವನ ಬಹಳಷ್ಟು ಕಷ್ಟಕರವಾಗಿದ್ದು, ಮಕ್ಕಳ ಹೆತ್ತವರಿಗೆ ಮಕ್ಕಳ ಶಿಕ್ಷಣದ ಬಗೆಗಿನ ಹಾಗು ಹೋಗುಗಳ ಸಣ್ಣ ಅಗತ್ಯತೆಗಳನ್ನು ನೀಗಿಸಲು ಸಮಸ್ಯೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಮಸ್ಯೆ ಅರಿತ ನಮ್ಮ ಸಂಸ್ಥೆಯ ಸರ್ವ ಸದಸ್ಯರ ನಿರ್ಣಯದಂತೆ ಗ್ರಾಮೀಣ ಭಾಗದ ಪಾದೆಬೆಟ್ಟು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿ ನೋಟ್ ಬುಕ್ ವಿತರಿಸಲಾಯಿತೆಂದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ವಿಜಯ ಕುಂದರ್, ಇನ್ನರ್ ವೀಲ್ ಕ್ಲಬ್ ನ ಪ್ರಮುಖರಾದ ಸುನೀತ ಭಕ್ತ ವತ್ಸಲ, ನಮ್ರತಾ, ತೆಂಕ ಗ್ರಾ.ಪಂ. ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಅಪ್ಪಿ ಟೀಚರ್, ಸುನಂದ, ಶುಭ ದಿನೇಶ್ ಮುಂತಾದವರು ಉಪಸ್ಥಿತರಿದ್ದರು.