ಬಂಟ್ವಾಳದ ನಂದಾವರ ಎಂಬಲ್ಲಿ ಗುಡ್ಡ ಕುಸಿತ : ಮಹಿಳೆ ಮೃತ್ಯು
ಬಂಟ್ವಾಳ ತಾಲೂಕಿನ ನಂದಾವರ ಎಂಬಲ್ಲಿ ಗುಡ್ಡ ಕುಸಿತವಾಗಿದ್ದು, ಅದು ಮನೆಯೊಂದರ ಮೇಲೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ಮಹಮ್ಮದ್ ಎಂಬವರ ಮನೆಯ ಮೇಲೆ ಇಂದು ಬೆಳಿಗ್ಗೆ ಗುಡ್ಡ ಕುಸಿದು ಬಿದ್ದಿದೆ. ಝರೀನಾ ಮತ್ತು ಸಫಾ ಎಂಬವರು ಸಿಲುಕಿಕೊಂಡಿದ್ದು ಸಫಾ ಅವರನ್ನು ರಕ್ಷಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಝರೀನಾ ಮನೆಯೊಳಗೆ ಅಸುನೀಗಿದ್ದಾರೆ. ಸ್ಥಳಕ್ಕೆ ಎನ್.ಡಿ.ಆರ್.ಎಫ್, ಅಗ್ನಿಶಾಮಕ ಸಿಬಂದಿ ಸ್ಥಳೀಯರೊಂದಿಗೆ ಸುರಿಯುವ ಮಳೆಯಲ್ಲೂ ರಕ್ಷಣಾ ಕಾರ್ಯ ನಡೆಸಿದ್ದಾರೆ.. ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ. ಸ್ಥಳದಲ್ಲಿ ತಹಶಿಲ್ದಾರ್ ಎಸ್.ಬಿ.ಕೂಡಲಗಿ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಮತ್ತು ಕಂದಾಯ ಇಲಾಖೆ ಸಿಬಂದಿ ಉಪಸ್ಥಿತರಿದ್ದರು.