ಪುರಸಭೆಯ ನಿರ್ಲಕ್ಷ್ಯ ಕೃಷಿ ಚಟುವಟಿಕೆಗಳಿಗೆ ಅಡ್ಡಿ: ಮಾಹಿತಿ ನೀಡಿದರೂ ಮೌನವಾದ ಅಧಿಕಾರಿಗಳು
ಕೃಷಿ ಚಟುವಟಿಕೆ ನಡೆಸಲು ಉತ್ತೇಜನ ನೀಡಬೇಕಾಗಿದ್ದ ಕಾಪು ಪುರಸಭೆಯಿಂದಲೇ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿದ್ದು, ಈ ಬಗ್ಗೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದರ, ಅವರು ಮೌನಕ್ಕೆ ಶರಣಾಗಿದ್ದಾರೆ ಎಂಬುದಾಗಿ ಕಾಪುವಿನ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಾಪು-ಮಲ್ಲಾರು ಮುಖ್ಯ ರಸ್ತೆ ಇಕ್ಕೆಲುಗಳನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ಗಿಡಗಂಟಿಗಳನ್ನು, ಮಣ್ಣ ದಿಬ್ಬಗಳನ್ನು ತೆಗೆದ್ದರೂ ಅಲ್ಲಿಂದ ತೆರವು ಮಾಡದೆ ರಸ್ತೆ ಅಂಚಿನಲ್ಲೇ ಬಿಟ್ಟು ಹೋದ ಪರಿಣಾಮ, ಅದು ಮಳೆಯ ನೀರಿನೊಂದಿಗೆ ಕೃಷಿ ಗದ್ದೆಗಳಿಗೆ ಇಳಿದು ನಾವು ಮಾಡಿದ ಕೃಷಿ ಚಟುವಟಿಕೆಗಳು ನಾಶವಾಗುತ್ತಿದೆ. ಈ ಬಗ್ಗೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತಂದಾಗ ಅದನ್ನು ತೆರವುಗೊಳಿಸಲು ಯಂತ್ರದ ಸಮಸ್ಯೆ ಇದೆ ನೋಡೋಣ ಎಂಬುದಾಗಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. ಒಂದು ಕಡೆಯಿಂದ ಸಮಯಕ್ಕೆ ಬಾರದ ಮಳೆ ಮತ್ತೊಂದು ಕಡೆ ಕೃಷಿಗೆ ಪೂರಕವಾಗಿ ಸುರಿಯದ ಮಳೆ, ಈ ಎಲ್ಲಾ ಸಮಸ್ಯೆಗಳ ಮಧ್ಯೆ ಕೃಷಿಕರನ್ನು ಬೆಂಬಲಿಸ ಬೇಕಾಗಿದ್ದ ಪುರಸಭೆ ನಮಗೆ ಸಮಸ್ಯೆಯೊಡ್ಡುತ್ತಿರುವುದರಿಂದ ನಾವು ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯಲು ಚಿಂತನೆ ನಡೆಸುವಂತ್ತಾಗಿದೆ ಎಂಬುದಾಗಿ ಕೃಷಿಕ ಉಮೇಶ್ ತಿಳಿಸಿದ್ದಾರೆ.