ಹೊನ್ನೆ ಎಣ್ಣೆಗೂ ಪೆಟ್ರೋಲು ಬದಲಿ ಭಾಗ್ಯ
ನಮ್ಮ ತುಳು ಹಿರಿಯರು ಸೀಮೆ ಎಣ್ಣೆ ಬರುವುದಕ್ಕೆ ಮೊದಲು ದೀಪಕ್ಕೆ ಹೊನ್ನೆ ಎಣ್ಣೆ ಇತ್ಯಾದಿ ಉಪಯೋಗಿಸುತ್ತಿದ್ದರು.
ಇದನ್ನು ಗಾಯ, ಸುಟ್ಟ ಗಾಯದ ಸಹಿತ ಚರ್ಮದ ಎಲ್ಲ ತೊಂದರೆಗಳಿಗೆ ಬಳಸುತ್ತಿದ್ದರು.
ತುಳುವರು ಇದರ ಎಣ್ಣೆ ಅಡುಗೆಗೆ ಬಳಸದಿದ್ದರೂ ಇದರ ಎಲೆಯಲ್ಲಿ ಅಡ್ಯೆ, ಗೊಡ್ಡು ಬೇಯಿಸುತ್ತಿದ್ದರು. ಇದು ನಿತ್ಯಹಸಿರು ಮರವಾಗಿದ್ದು ಕೊಂಗಣ ಏಶಿಯಾದ ಕರಾವಳಿಯಲ್ಲೆಲ್ಲ ಬೆಳೆಯುತ್ತದೆ.
ಇದು ಕ್ಯಾಲೋಪಿಲುಮ್ ಇನೋಪಿಲುಮ್ ಲಿನ್ ಎಂಬ ವೈಜ್ಞಾನಿಕ ವಿಭಾಗದ್ದಾಗಿದೆ.
ಈಗ ಜಗತ್ತೆಲ್ಲ ಪಳೆಯುಳಿಕೆ ಇಂಧನ ಪೆಟ್ರೋಲಿಯಮ್ಮಿಗೆ ಬದಲಿ ಹುಡುಕುತ್ತಿದೆ. ಹೊನ್ನೆ ಎಣ್ಣೆ ಕೂಡ ಅವುಗಳಲ್ಲಿ ಒಂದಾಗಿದೆ. ಪರಿಸರಸ್ನೇಹಿ ಬದಲಿ ಇಂಧನದ ಸ್ಥಾನ ಇದಕ್ಕೂ ಇದೆ.