ಬೆಂಗಳೂರು ; ಆನ್‍ಲೈನ್‍ನಲ್ಲಿ ಮಹಿಳೆಗೆ 80,000 ರೂಪಾಯಿ ಟೋಪಿ
ಬೆಂಗಳೂರಿನ ಮಹಿಳೆ ಒಬ್ಬರಿಗೆ ವಿಶೇಷ ಪೂಜೆ ಸಲ್ಲಿಸುವುದಾಗಿ ಆನ್‍ಲೈನ್ ಮೂಲಕ ವಂಚಿಸಿರುವ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯೊಬ್ಬರು ವಿಶೇಷ ಪೂಜೆಗೆ ಹುಡುಕುವಾಗ ಆನ್‍ಲೈನ್‍ನಲ್ಲಿ ಶರಣ್ ಭಟ್ ಎಂಬ ಪೂಜಾರಿಯ ಫೋನ್ ನಂಬರ್ ಯಾರೋ ಕೊಟ್ಟರು. ನನ್ನ ಖಾತೆಗೆ 50,000 ರೂಪಾಯಿ ಹಾಕಿ. ದೇವರ ಮುಂದೆ ಪೂಜೆ ಸಲ್ಲಿಸಿ ಮನೆಗೆ ಬಂದು ವಿಶೇಷ ಪೂಜೆ ಮಾಡುವೆ ಎಂದು ಶರಣ್ ಭಟ್ ತಿಳಿಸಿದಂತೆ ಹಣ ವರ್ಗಾಯಿಸಿದ್ದಾರೆ. ಮನೆಗೆ ಬರಲು ಕೆಲವು ವಸ್ತು ಖರೀದಿಗೆ 30,000 ರೂಪಾಯಿ ಹಾಕಿ ಎಂದಿದ್ದಾರೆ. ಮಹಿಳೆಯು ಹೀಗೆ 80,000 ಹಾಕಿದ ಮೇಲೆ ಶಂಕರ ಭಟ್ ಪುರೋಹಿತನೂ ಇಲ್ಲ, ಅವರ ಫೋನೂ ಇಲ್ಲ ಎಂದು ದೂರು ನೀಡಲಾಗಿದೆ.