ತೆಕ್ಕಿಲ್ ಶಾಲಾ ವತಿಯಿಂದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರಿಗೆ ಸನ್ಮಾನ

ಸುಳ್ಯದ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ ವತಿಯಿಂದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಇವರು ಮೈಸೂರು ಪೇಟ ತೊಡಿಸಿ ಶಾಲು, ಹಾರ ಮತ್ತು ಸ್ಮರಣಿಕೆ, ತೆಕ್ಕಿಲ್ ದಶದೀವಿಕೆ ಹಾಗು ಬೆಳಕಿನೆಡೆಗೆ 10 ಮುಸ್ಲಿಂ ಕತೆಗಳ ಪುಸ್ತಕ ನೀಡಿ ಸ್ವಾಗತಿಸಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ ಡಿ ಇವರು ಶಾಲೆಯ ಶಿಕ್ಷಕ ವೃಂದದವರನ್ನು ಪರಿಚಯಿಸಿದರು. ಮತ್ತು ನಮ್ಮ ಶಾಲೆಯು ಸತತವಾಗಿ 5ನೇ ಬಾರಿ ಶೇಕಡ ನೂರರಷ್ಟು ಫಲಿತಾಂಶ ಪಡೆದಿರುವುದಕ್ಕೆ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ಸಂತಸ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಇಂತಹ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರನ್ನು ಮತ್ತು ಶಿಕ್ಷಕ ವೃಂದದವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಎಸ್.ಕೆ ಹನೀಫ್ ಗೂನಡ್ಕ ಮತ್ತು ಶಾಲೆಯ ಶಿಕ್ಷಕ ವೃಂದದವರಾದ ಸೌಮ್ಯ, ತಾಹಿರಾ, ಸುಭಾಷಿಣಿ,ಮೆಹೆಕ್ನಾಜ್, ಪರ್ಜಾನ, ಶೃತಿ, ತೌಸೀನಾ,ಆಯುಷತ್ ನೌಫಿಯ,ರುಬೀನಾ ಉಪಸ್ಥಿತರಿದ್ದರು.

Related Posts

Leave a Reply

Your email address will not be published.