ಕರ್ನಾಟಕ ಪಿಯುಸಿ ಫಲಿತಾಂಶ : ದಕ್ಷಿಣ ಕನ್ನಡ ಪ್ರಥಮ, ಗದಗ ಕೊನೆ

ಕರ್ನಾಟಕ 2023-2024ರ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಯುಥಾಪ್ರಕಾರ ಹೆಣ್ಣುಮಕ್ಕಳು ಮೇಲುಗಯ್ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದೆ.


ಗದಗ ಜಿಲ್ಲೆಯು ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಬೆಂಗಳೂರಿನ ಮೇಧಾ ಡಿ. ಅವರು ಕಲಾ ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ; ಅಲ್ಲದೆ ವಿಜಯಪುರದ ವೇದಾಂತ್ ಮತ್ತು ಕವಿತಾ ಕೂಡ ಟಾಪರ್‍ಗಳಲ್ಲಿ ಇದ್ದಾರೆ. ವಿಜ್ಞಾನ ವಿಭಾಗದಲ್ಲಿ 598 ಅಂಕ ಪಡೆದ ವಿದ್ಯಾಲಕ್ಷ್ಮಿ ಮೊದಲ ಸ್ಥಾನ ಹಿಡಿದಿದ್ದಾರೆ. ಜಾನವಿ ಕೂಡ ಈ ವಿಭಾಗದ ಟಾಪರ್ ಆಗಿರುವರು. ವಾಣಿಜ್ಯ ವಿಭಾಗದಲ್ಲಿ ಡಿ. ಎಲ್. ಮಂಜುನಾಥ್ ಮೊದಲ ಸ್ಥಾನ ಪಡೆದಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯು 97.37 ಶೇಕಡಾ ಫಲಿತಾಂಶ ಪಡೆದಿದೆ. ಎರಡು ಮತ್ತು ಮೂರನೆಯ ಸ್ಥಾನದಲ್ಲಿರುವ ಉಡುಪಿ ಮತ್ತು ವಿಜಯಪುರ ಜಿಲ್ಲೆಗಳು ಕ್ರಮವಾಗಿ 96.80%, 94.89% ತೇರ್ಗಡೆ ಫಲಿತಾಂಶ ಕಂಡಿವೆ.


ಪರೀಕ್ಷೆಗೆ 6,98,378 ಮಂದಿ ಪರೀಕ್ಷೆಗೆ ಅರ್ಹರಿದ್ದರೂ ಪರೀಕ್ಷಗೆ ಹಾಜರಾದವರ ಸಂಖ್ಯೆಯು 6,81,079 ಆಗಿದೆ. ಅವರಲ್ಲಿ 5,52,690 ತೇರ್ಗಡೆಯಾಗಿದ್ದಾರೆ. ಒಟ್ಟು ಅದು 81.15 ಶೇಕಡಾ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣವಾಗಿದೆ.

Related Posts

Leave a Reply

Your email address will not be published.