ಪಡುಬಿದ್ರಿ ಇನ್ನರ್ ವ್ಹೀಲ್ ಕ್ಲಬ್‍ನಿಂದ, ನಿಟ್ಟೂರು ಅನಾಥ ಧಾಮದ ಮಕ್ಕಳಿಗೆ ಅಗತ್ಯ ವಸ್ತುಗಳ ಪೂರೈಕೆ

ಪಡುಬಿದ್ರಿ ಇನ್ನರ್ ವ್ಹೀಲ್ ಕ್ಲಬ್ ತನ್ನ ಸದಸ್ಯರೊಡಗೂಡಿ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ನಿಟ್ಟೂರಿನ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖಾ ಆಶ್ರಯದ ರಾಜ್ಯ ಮಹಿಳಾ ನಿಲಯಕ್ಕೆ ಭೇಟಿನೀಡಿ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ನಡೆಸುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಿದ್ದಾರೆ
.ಉಡುಪಿಯ ಮಹಿಳಾ ನಿಲಯಕ್ಕೆ ಭೇಟಿ ನೀಡಿದ ಇನ್ನರ್ ವ್ಹೀಲ್ ಸದಸ್ಯರು, ಸರಳ ಕಾರ್ಯಕ್ರಮ ನಡೆಸಿ ಮಕ್ಕಳ ಅಗತ್ಯ ವಸ್ತುಗಳನ್ನು ವಿತರಿಸಿದರು. ಈ ಸಂದರ್ಭ ಆಶ್ರಯ ವಾಸಿಗಳನ್ನು ಉದ್ಧೇಶಿಸಿ ಮಾತನಾಡಿದ ಇನ್ನರ್ ವ್ಹೀಲ್ ಸಂಸ್ಥೆಯ ಕಾರ್ಯದರ್ಶಿ ಸುನೀತಾ ಭಕ್ತ ವಲ್ಸಲ, ಇಲ್ಲಿ ವಾವಿರುವ ನೀವ್ಯಾರೂ ಅನಾಥರಲ್ಲ, ನಿಮ್ಮೊಂದಿಗೆ ನಮ್ಮಂಥ ಅದೇಷ್ಟೋ ಹಿತೈಷಿಗಳು ಇದ್ದಾರೆ. ನೀವು ಮನೆಬಿಟ್ಟು ಯಾವುದೇ ಸಮಸ್ಯೆಯಿಂದಾಗಿ ಬಂದಿರ ಬಹುದು, ನಮ್ಮ ಸ್ವಂತ
ಮನೆಯಲ್ಲಿ ಸಿಗದ ಸ್ಚಚ್ಚ ಪರಿಸರ, ಸ್ನೇಹ -ಪ್ರೀತಿ ಒಡನಾಡ ಇಲ್ಲಿ ಸಿಗುತ್ತಿರುವುದು ನಾವು ಕಂಡುಕೊಂಡ ಸತ್ಯ. ಸಣ್ಣ ಪುಟ್ಟ ಮನಸ್ತಾಪಗಳು ಬಂದರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನಮ್ಮದೇ ಮನೆ ಎಂಬ ಭಾವನೆಯಿಂದ ಸಂಸ್ಥೆಯ ಮುಖ್ಯಸ್ಥರು ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದಾಗ ಈ ಆಶ್ರಮವಾಸ ನಿಮಗೆ ಸ್ವರ್ಗ ಸಮಾನವಾಗುವುದು. ಮಕ್ಕಳು ಇಲ್ಲಿ ಇದ್ದುಕೊಂಡೇ ವಿದ್ಯಾರ್ಜನೆ ಮಾಡಿ ಮುಂದೆ ತಾವು ಸ್ವಂತ ಬದುಕು ಕಟ್ಟಿಕೊಳ್ಳುವ ಅವಕಾಶವೂ ನಿಶ್ಚಲವಾಗಿದೆ. ಇಲ್ಲಿರುವ ತಾಯಿಯಂದಿರು ಈ ಮಕ್ಕಳಿಗೆ ತಾಯಿ ಪ್ರೀತಿ ತೋರಿಸಿದಾಗ ತಮ್ಮ ಬದುಕೂ ಸಾರ್ಥಕತೆ ಕಾಣುತ್ತೇ ಎಂದರು.
ಈ ಸಂದರ್ಭ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ವಿಮಲಾ ಕೆ. ಸಾಲ್ಯಾನ್, ಸದಸ್ಯರಾದ ನಮೃತ ಮಹೇಶ್, ರಾಜೇಶ್ವರಿ ಅವಿನಾಶ್, ಶಶಿಕಲ, ವಸುಧಾ ಕೋಟ್ಯಾನ್, ಸುಲೋಚನ ಮಹಿಳಾ ನಿಲಯದ ಪ್ರಮುಖರಲ್ಲಿ ಒರ್ವರಾದ ಲೀಲಾವತಿ ಇದ್ದರು.
