ಬೆಳ್ತಂಗಡಿ: ಬಾಲರಾಮ ಪ್ರತಿಷ್ಠಾಪನೆ ಐತಿಹಾಸಿಕ ದಿನ-ಕನ್ಯಾಡಿ ಶ್ರೀ
ಜನವರಿ 22ರಂದು ನಮಗೆ ಐತಿಹಾಸಿಕ ದಿನ ಎಂದು ಕನ್ಯಾಡಿ ಶ್ರೀಗಳು ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಕನ್ಯಾಡಿ ನಿತ್ಯಾನಂದ ನಗರದ ಶ್ರೀರಾಮ ದೇವಸ್ಥಾನದಲ್ಲಿ ಮಾತನಾಡಿ, ಸುಮಾರು 500 ವರ್ಷಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆ ನಡೆಯುತ್ತಿದೆ. ಇವತ್ತು ನಮ್ಮ ಕನಸು ನನಸಾಗಿದೆ. ಹಲವಾರು ಮಂದಿ ಕರಸೇವಕರ ಬಲಿದಾನದಿಂದ ಇವತ್ತು ಭವ್ಯರಾಮ ಮಂದಿರ ನಿರ್ಮಾಣವಾಗಿದೆ. ಇದಕ್ಕೆ ಹೋರಾಟ ಮಾಡಿದ ಎಲ್ಲರಿಗೂ ಶ್ರೀರಾಮ ದೇವರ ಆಶೀರ್ವಾದ ಇರಲಿ ಎಂದರು.