ಜನಾರ್ದನ ಪೂಜಾರಿ ಅವರಿಂದ ಡೊಂಗರಕೇರಿಯ ವೆಂಕಟ್ರಮಣ ದೇವಾಲಯಕ್ಕೆ ಭೇಟಿ

ವೈಕುಂಟ ಏಕಾದಶಿಯ ಪ್ರಯುಕ್ತ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿಯವರು ಇಂದು ಮಂಗಳೂರಿನ ಡೊಂಗರಕೇರಿಯ ಶ್ರೀ ವೆಂಕಟ್ರಮಣ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕ್ಷೇತ್ರದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಪೂಜೆಯ ಬಳಿಕ ಜನಾರ್ದನ ಪೂಜಾರಿಯವರನ್ನು ಸನ್ಮಾನಿಸಿದರು ಈ ವೇಳೆ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಅವರು ಜನಾರ್ದನ ಪೂಜಾರಿಯವರ ಜೊತೆಗಿದ್ದರು
