ಜೂಲಿಯಟ್-2 ಸಿನಿಮಾ ತುಳುನಾಡಿನ ಹೊಸ ಭರವಸೆ

ಕನ್ನಡದಲ್ಲಿ ಕರಾವಳಿ ಕಂಟೆಂಟ್ ಇರುವ ಚಿತ್ರಗಳು ಹೆಚ್ಚು ಜನಪ್ರೀಯತೆ ಪಡೆಯುತ್ತಿವೆ. ಈ ಮೂಲಕ ಸಿನಿಪ್ರಿಯರ ಅಭಿರುಚಿ ಕೂಡ ಬದಲಾಗುತ್ತಿದೆ. ಇದೀಗ ತುಳುನಾಡಿನ ಹೊಸ ಭರವಸೆಯೊಂದಿಗೆ ಜೂಲಿಯಟ್-2 ಕನ್ನಡ ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ.
ಹೊಸ ರೀತಿಯ ಕಥೆಯೊಂದಿಗೆ ಮನರಂಜಿಸುತ್ತಿರುವ ಕರಾವಳಿ ಕಡೆಯ ಕಥೆಗಳಲ್ಲಿ ಜೂಲಿಯಟ್-2 ಟೀಸರ್ ಹೆಚ್ಚು ಗಮನಸೆಳೆಯುತ್ತಿದೆ. ಜೂಲಿಯಟ್-2 ಸಿನಿಮಾ ಹೆಸರೇ ಹೇಳುವಂತೆ ಮಹಿಳಾ ಪ್ರಧಾನ ಚಿತ್ರ ಆಗಿದೆ. ಇಲ್ಲಿ ಹೆಚ್ಚು ಮಕ್ಕಳು ಎಷ್ಟು ಸ್ಟ್ರಾಂಗ್ ಅನ್ನೊದನ್ನು ತೋರಿಸಲಾಗಿದೆ. ಆದರೆ ಭಯ ಹುಟ್ಟಿಸೋ ದೃಶ್ಯಗಳಿವೆ. ಬಿಹೈಂಡ್ ದಿ ಡಾರ್ಕ್ ಡೋರ್ ಅನ್ನುವ ಸಬ್ ಟೈಟಲ್ ಇಡೀ ಚಿತ್ರದ ಬಗ್ಗೆ ಬೇರೆ ಫೀಲ್ ಕೊಡುತ್ತದೆ.
ತಂದೆಯ ಕನಸುಗಳನ್ನು ನನಸು ಮಾಡಲು ಹೊರಟ ಹುಡುಗಿಗೆ ಈ ಜೂಲಿಯೆಟ್ ಅನ್ನೊದು ಒಟ್ಟು ಕಥೆಯ ತಾತ್ಪರ್ಯ ಆಗಿದೆ. ಜೂಲಿಯಟ್-2 ಚಿತ್ರವನ್ನು ವಿರಾಟ್ ಬಿ. ಗೌಡ ನಿರ್ದೇಶನ ಮಾಡಿದ್ದಾರೆ. ಲಿಖಿತ್ ಆರ್ ಕೋಟ್ಯಾನ್ ನಿರ್ಮಾಪಕರಾಗಿದ್ದು, ಸಂದೀಪ್ ಆರ್. ಬಲ್ಲಾಳ್ ಮತ್ತು ರಜತ್ ರಾವ್ ಈ ಸಿನಿಮಾಕ್ಕೆ ಸಂಗೀತವನ್ನು ನೀಡಿದ್ದಾರೆ. ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಸದ್ಯಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಿ ಹೊಸ ಭರವಸೆಯನ್ನು ಮೂಡಿಸಿದೆ.
