ಕಡಬ: ಆನೆ ತುಳಿತಕ್ಕೊಳಗಾಗಿದ್ದ ವ್ಯಕ್ತಿ ಮೃತ್ಯು
ಕಡಬ, ನ.07. ತಿಂಗಳ ಹಿಂದೆ ಕಡಬ ತಾಲೂಕಿನ ಐತ್ತೂರು ಗ್ರಾಮದ ಕೊಣಾಜೆ ರಸ್ತೆಯಲ್ಲಿ ಆನೆ ತುಳಿತ್ತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರದಂದು ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಕೊಣಾಜೆ ಸಮೀಪದ ಗೇರ್ತಿಲ ನಿವಾಸಿ ಚೋಮ ಎಂದು ಗುರುತಿಸಲಾಗಿದೆ. ಚೋಮ ಅವರು ಮರ್ದಾಳದಿಂದ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಐತ್ತೂರು – ಕೊಣಾಜೆ ರಸ್ತೆಯಲ್ಲಿ ಕಾಡಾನೆ ದಾಳಿ ನಡೆಸಿ ಗಂಭೀರ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಕೆಲ ದಿನಗಳ ಹಿಂದೆ ಮನೆಗೆ ತರಲಾಗಿತ್ತು. ಚೋಮ ಅವರು ಇಂದು ಬೆಳಗ್ಗಿನ ಜಾವ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.