ಕಡಬ: ಪಂಚಾಯತ್ ಸಂಪರ್ಕ ರಸ್ತೆ ಬಂದ್ ಮಾಡಿ ದಿಗ್ಬಂಧನ: ತಹಶೀಲ್ದಾರರಿಂದ ತೆರವು
ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಬದನೆ ಎಂಬಲ್ಲಿ ಪಂಚಾಯತ್ ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ವೆಂಕಪ್ಪ ಪೂಜಾರಿ ಮತ್ತು ರೂಪೇಶ್ ಕುಮಾರ್ ಅವರು ಬಂದ್ ಮಾಡಿರುವ ಬಗ್ಗೆ ಇಚ್ಲಂಪಾಡಿ ಗ್ರಾಮದ ಬದನೆ ನಿವಾಸಿ ಶ್ರೀನಿವಾಸ್ ಪೂಜಾರಿಯವರು, ಪುತ್ತೂರು ಸಹಾಯಕ ಆಯುಕ್ತರು, ಕಡಬ ತಹಶೀಲ್ದಾರರು, ಗ್ರಾಮ ಪಂಚಾಯತ್ ಹಾಗೂ ಪೋಲಿಸ್ ಇಲಾಖೆಗೆ ದೂರು ನೀಡಿದ್ದಾರೆ.
ಕಡಬ ತಹಶೀಲ್ದಾರರಾದ ಪ್ರಭಾಕರ ಕಜುರೆ, ಕಂದಾಯ ನಿರೀಕ್ಷಕರಾದ ಪೃಥ್ವಿರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಿಟಾಚ್‍ನ ಮೂಲಕ ಬಂದ್‍ಗೊಳಿಸಿದ ರಸ್ತೆಯನ್ನು ತೆರೆವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಇತ್ತಂಡಗಳ ಜತೆ ಮಾತುಕತೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.