ಕಡಬ : ಬಸ್ಸಿನಿಂದ ಎಸೆಯಲ್ಪಟ್ಟು ವ್ಯಕ್ತಿ ಸಾವು
ಕಡಬ, ಸೆ. 24: ಚಲಿಸುತ್ತಿದ್ದ ಕೆಎಸ್ ಆರ್ ಟಿ ಸಿ ಬಸ್ಸಿನಿಂದ ವ್ಯಕ್ತಿಯೊಬ್ಬರು ಕೆಳಕ್ಕೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಕಡಬ ಪೇಟೆಯ ಅಂಚೆ ಕಛೇರಿ ಬಳಿ ರವಿವಾರ ಸಂಜೆ ನಡೆದಿದೆ. ಕಡಬ ಸಮೀಪದ ಕಳಾರ ಕುದ್ಕೊಳಿ ನಿವಾಸಿ ಅಚ್ಚುತ ಗೌಡ (63) ಮೃತ ಪಟ್ಟವರು.
ಕಡಬದಿಂದ ಮಂಗಳೂರಿನಿಂದ ತೆರಳುತ್ತಿದ್ದ ಬಸ್ಸು ಏರಿ ಮನೆಯ ಕಡೆ ಹೊರಟ ಬಸ್ಸು ಕಡಬ ಅಂಚೆ ಕಛೇರಿ ಬಳಿ ತಲುಪುತ್ತಿದ್ದoತೆಯೇ ತಿರುವಿನಲ್ಲಿ ಆಯತಪ್ಪಿ ಕೆಳಕ್ಕೆ ಎಸೆಯಲ್ಪಟ್ಟಿದ್ದಾರೆ. ಅವರೊಂದಿಗೆ ಬಲ್ಯದ ದೇರಾಜೆ ನಿವಾಸಿ ರುಕ್ಮಯ್ಯ ಯಾನೆ ಚಂದು ಎಂಬವರೂ ಕೆಳಕ್ಕೆ ಬಿದ್ದಿದ್ದಾರೆ. ಚಂದು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದರೆ ತೀವ್ರ ಗಾಯಗೊಂಡ ಅಚ್ಚುತ ಗೌಡ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಮೂಲತ ಪೆರಾಬೆ ಗ್ರಾಮದ ಬೀರಂತಡ್ಕ ನಿವಾಸಿ. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.