ಬಹರೈನ್ ಕನ್ನಡ ಸಂಘದಿಂದ ಯಕ್ಷ ವೈಭವ-2023

ಕನ್ನಡ ಸಂಘ ಬಹರೈನ್‍ದಿಂದ ಯಕ್ಷ ವೈಭವ –2023ರ ಅಂಗವಾಗಿ ಸಂಘದ ಯಕ್ಷಗಾನ ಕಲಾವಿದರಿಂದ ನಾಟ್ಯಗುರು ದೀಪಕ್ ರಾವ್ ಪೇಜಾವರ ನಿರ್ದೇಶನದಲ್ಲಿ ಶ್ರೀಕೃಷ್ಣ ಲೀಲಾಮೃತ ಎಂಬ ಯಕ್ಷಗಾನ ಪ್ರದರ್ಶನದ ಪೂರ್ವ ತಯಾರಿಗೆ ಮುಹೂರ್ತ ಪೂಜೆಯು ನೆರವೇರಿತು.

ಸೆಪ್ಟೆಂಬರ್ 29 ರಂದು ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿರುವ ಈ ಯಕ್ಷಗಾನ ಪ್ರದರ್ಶನದ ಪೆÇೀಸ್ಟರ್ ಬಿಡುಗಡೆ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನೆರವೇರಿತು.

ನಾಟ್ಯಗುರು ಶ್ರೀ ದೀಪಕ್ ರಾವ್ ಪೇಜಾವರ, ಸಂಘದ ಹಿರಿಯ ಸದಸ್ಯರಾದ ಸರ್ವಶ್ರೀ ನಾಗೇಶ್ ಶೆಟ್ಟಿ , ರಮೇಶ್ ರಾಮಚಂದ್ರನ್, ಅತಿಥಿ ಭಾಗವತ ಶ್ರೀ ರೋಶನ್ ಎಸ್.ಕೋಟ್ಯಾನ್, ಹಿರಿಯ ಕಲಾವಿದರಾದ ಶ್ರೀ ಮೋಹನ್ ಎಡನೀರು ಧನಂಜಯ ಕಿನ್ನಿಗೋಳಿ, ಸಂಘದ ಪದಾಧಿಕಾರಿಗಳು ಪೋಸ್ಟರ್ ಬಿಡುಗಡೆ ಮಾಡಿ ಯಕ್ಷ ವೈಭವ – 2023 ಕ್ಕೆ ಶುಭಹಾರೈಸಿದರು.

ಅತಿಥಿ ಭಾಗವತರಾಗಿ ಶ್ರೀ ರೋಶನ್ ಎಸ್.ಕೋಟ್ಯಾನ್ (ಸೌದಿ ಅರೇಬಿಯ) ಇವರು ಭಾಗವಹಿಸಲಿದ್ದಾರೆ.

ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ನೆರೆದ ಕಲೋಪಾಸಕ ಬಂಧುಗಳನ್ನು ಸ್ವಾಗತಿಸಿ ಈ ಕಾರ್ಯಕ್ರಮಕ್ಕೆ ಎಲ್ಲರ ತನುಮನಧನದ ಸಹಕಾರವನ್ನು ವಿನಂತಿಸುತ್ತಾ ,ಧನ್ಯವಾದ ಸಮರ್ಪಣೆ ಮಾಡಿದರು.

Related Posts

Leave a Reply

Your email address will not be published.