ಕಡಬ : ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಲು ಸುಳ್ಯ ಬ್ಲಾಕ್‍ನಿಂದ ಶಿಫಾರಸ್ಸು ಮಾಡಿಲ್ಲ, ಮಮತಾ ಗಟ್ಟಿ
ಸುಳ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಮೇಲೆ ಕೆಲವರನ್ನು ಉಚ್ಛಟಿಸಲಾಗಿದೆ ಎನ್ನುವ ಸುದ್ದಿ ಯಾವುದೋ ಕಾರಣಕ್ಕೆ ಹರಡಿತ್ತು. ಆದರೆ ಸುಳ್ಯ ಬ್ಲಾಕ್ ಕಾಂಗ್ರೆಸ್‍ನಿಂದ ಉಚ್ಛಾಟನೆಗೆ ಯಾವುದೇ ಶಿಫಾರಸ್ಸು ಹೋಗಿಲ್ಲ ಎಂದು ಕೆ.ಪಿ.ಸಿ.ಸಿ ಉಸ್ತುವಾರಿ ಮಮತಾ ಗಟ್ಟಿ ಸ್ಪಷ್ಟಪಡಿಸಿದರು.
ಅವರು ಕಡಬ ಅನುಗ್ರಹ ಸಭಾಭವನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಮೇಲೆ ಉಚ್ಛಾಟಿಸಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೇಸ್‍ನಿಂದ ಯವುದೇ ಶಿಫಾರಸ್ಸು ಹೋಗಿಲ್ಲ. ಯಾವ ಕಾರಣಕ್ಕೆ ಹೀಗಾಗಿದೆ ಎಂದು ಗೊತ್ತಿಲ್ಲ, ಹಾಗಾಗಿ ಉಚ್ಛಾಟನೆ ಎನ್ನುವ ವಿಚಾರವನ್ನು ಹಿಂಪಡೆಯಲಾಗಿದೆ ಎಂದು ಮೌಖಿಕವಾಗಿ ಪಕ್ಷದ ವರಿಷ್ಠರು ತಿಳಿಸಿದ್ದು, ಎಲ್ಲರನ್ನೂ ಸಭೆಗೆ ಕರೆಯಿರಿ ಉಚ್ಛಾಟಿತರು ಎಂದು ಯಾರನ್ನೂ ಬಿಡುವುದು ಬೇಡ, ಎಲ್ಲರನ್ನೂ ಪಕ್ಷದಡಿಯಲ್ಲಿ ಸೇರಿಸುವ ಮೂಲಕ ಪಕ್ಷದ ಸಂಘಟನೆ ಆಗಬೇಕು, ಎಲ್ಲರನ್ನು ಒಟ್ಟಿಗೆ ಸೇರಿಸಿಕೊಂಡು ಪಕ್ಷ ಸಂಘಟನೆ ಮಾಡಬೇಕು ಎಂದು ಪಕ್ಷದ ಅಧ್ಯಕ್ಷರು ಸೂಚನೆ ನಿಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ನಾೈಕ್ ಮೇಲಿನಮನೆ, ಕಾಂಗ್ರೇಸ್ ಮುಖಂಡರಾದ ಪಿ.ಪಿ.ವರ್ಗೀಸ್, ಬಾಲಕೃಷ್ಣ ಗೌಡ ಬಳ್ಳೇರಿ, ವಿಜಯಕುಮಾರ್ ರೈ ಕೆರ್ಮಾಯಿ ಮತ್ತಿತರರು ಉಪಸ್ಥಿತರಿದ್ದರು.