ಕಡಬ : ನಾಳೆ ಒಕ್ಕಲಿಗ ಗೌಡ ಸಂಘದ ಪೂರ್ವಭಾವಿ ಸಭೆ
ಕಡಬ :ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ ತಾಲೂಕು ಇದರ ಪದಗ್ರಹಣ ಕಾರ್ಯಕ್ರಮ, ಸುಸಜ್ಜಿತ ನೂತನ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಸ್ಪಂದನ ಸಮುದಾಯ ಸಹಕಾರ ಸಂಘ (ರಿ.) ಕಡಬ ಇದರ ಉದ್ಘಾಟನಾ ಕಾರ್ಯಕ್ರಮವನ್ನು 2023ರ ಡಿಸೆಂಬರ್ 26ರಂದು ಕಡಬದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯೊಂದಿಗೆ ಸಮಾರಂಭ ನಡೆಯಲಿದೆ.
ಈ ಸಮಾರಂಭದ ಬಗ್ಗೆ ಚರ್ಚಿಸುವ, ರೂಪುರೇಷೆ ಸಿದ್ಧಪಡಿಸುವ ಹಾಗೂ ವ್ಯವಸ್ಥೆಗಳ ಬಗ್ಗೆ ಸಮಾಲೋಚಿಸುವ ನಿಟ್ಟಿನಲ್ಲಿ 2023ರ ನವಂಬರ್ 18ರಂದು ಮಧ್ಯಾಹ್ನ 2 ಗಂಟೆಗೆ ಕಡಬ ವಲಯ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದು, ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.