ಪಾಜಕಕ್ಷೇತ್ರದಲ್ಲಿ ವಿಜೃಂಭಣೆಯಿಂದ ಮಧ್ವಜಯಂತಿ ಮಹೋತ್ಸವ

ಆಚಾರ್ಯ ಮಧ್ವರ ಅವತರ ಭೂಮಿಯಾದ ಪಾಜಕಕ್ಷೇತ್ರದಲ್ಲಿ ವಿಜಯದಶಮಿಯಂದು ಮಧ್ವಜಯಂತಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.ಪ್ರಾತಃ ಕಾಲದಲ್ಲಿ ಸೋದೆ ವಾದಿರಾಜ ಮಹಾಮುನಿಗಳಿಂದ ಪ್ರತಿಷ್ಠಿತ ಆಚಾರ್ಯರ ಪ್ರತಿಮೆಗೆ ಪಂಚಾಮೃತ ಅಭಿಷೇಕ ಸಹಿತ ವಿಶೇಷ ಪೂಜೆಗಳು ನಡೆದವು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು. ಆಗಮಿಸಿದ ವಿವಿಧ ವಿದ್ವಾಂಸರು ಸರ್ವಮೂಲ ಪಾರಾಯಣ ಹಾಗೂ ಉಪನ್ಯಾಸಗಳನ್ನು ನಡೆಸಿದರು.ಸಾಯಂಕಾಲ ಶಿರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರು ಹಾಗೂ ಚಿತ್ರಾಪುರ ಮಠಾಧೀಶರಾದ ವಿದ್ಯೇಂದ್ರತೀರ್ಥ ಶ್ರೀಪಾದರು ಆಗಮಿಸಿ ಗುರುಗಳದರ್ಶನ ಪಡೆದು ಆಚಾರ್ಯ ಮಧ್ವರ ಸಂದೇಶಗಳನ್ನು ತಿಳಿಸಿದರು ನಂತರ ರಾತ್ರಿ ಪೂಜೆ,ರಂಗಪೂಜೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ ನಡೆಯಿತು.

Related Posts

Leave a Reply

Your email address will not be published.