ಪಡುಬಿದ್ರಿ: ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಮಾರಿಗುಡಿ: ಡಾ.ರಾಜಶೇಖರ್ ಕೋಟ್ಯಾನ್ ಭೇಟಿ: ಶಿಲಾಸ್ತಂಭದ ವೆಚ್ಚ ಭರಿಸುವ ಭರವಸೆ
ಉಡುಪಿ: ಕಾಪು ಹೊಸ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದ್ದು,ಹೊಸ ಮಾರಿಗುಡಿಗೆ ಮಂಗಳವಾರದಂದು ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷರಾದ ಡಾ. ರಾಜ್ ಶೇಖರ್ ಕೋಟ್ಯಾನ್ ರವರು ಸಮಾಜದ ಮುಖಂಡರೊಂದಿಗೆ ಭೇಟಿ ನೀಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ತಮ್ಮ ಸಮಾಜಕ್ಕೆ ಮೀಸಲಿಟ್ಟ ಒಂದು ಕೋಟಿ ವೆಚ್ಚದ ಬೃಹತ್ ಶಿಲಾ ಸ್ತಂಭದ ವೆಚ್ಚವನ್ನು ತಮ್ಮ ಸಮಾಜ ಬಾಂಧವರಿಂದಲೇ ಭರಿಸಿ ಶೀಘ್ರದಲ್ಲೇ ನೀಡುವುದಾಗಿ ತಿಳಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ಡಾ.ರಾಜಶೇಖರ್ ಕೋಟ್ಯಾನ್
ಮತ್ತವರ ತಂಡವನ್ನು ಸಮಿತಿಯ ಪದಾಧಿಕಾರಿಗಳು ಗೌರವಿಸಿದರು, ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿಗಳು ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು.
ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ.ಶೆಟ್ಟಿ ಬಾಲಾಜಿ, ಗೌರವ ಸಲಹೆಗಾರರಾದ ವಿಕ್ರಮ್ ಕಾಪು, ಬಿ ಎನ್.ಶಂಕರ್ ಪೂಜಾರಿ, ಉದ್ಯಮಿ ಗಣೇಶ್ ಪೂಜಾರಿ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ , ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷರಾದ ಹರೀಶ್ ಡಿ. ಸಾಲ್ಯಾನ್, ಸತೀಶ್ ಪೂಜಾರಿ ಬೆಳಪು, ರಾಕೇಶ್ ಕುಂಜೂರು, ಶಿವಣ್ಣ ಎಸ್. ಅಂಚನ್ ಮತ್ತು ದೇವಳದ ಪ್ರಬಂಧಕರಾದ ಗೋವರ್ಧನ್ ಶೇರಿಗಾರ್, ಸಾವಿತ್ರಿ ಗಣೇಶ್ ಉಪಸ್ಥಿತರಿದ್ದರು.