ಶಾಸಕ ಸುನಿಲ್ ಕುಮಾರ್ ಬೆದರಿಕೆ ಖಂಡಿಸುತ್ತೇನೆ : ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್
ಚುನಾವಣೆಯಲ್ಲಿ ಕಾರ್ಯಕರ್ತರು ಒಂದು ಪಕ್ಷದ ಪರ ಮತ್ತು ವಿರುದ್ದ ಕೆಲಸ ಮಾಡುವುದು ಸಾಮಾನ್ಯ ಚಟುವಟಿಕೆ ಆದರೆ ನನ್ನ ವಿರುದ್ಧ ಕೆಲಸ ಮಾಡಿದವರನ್ನು ನೋಡಿಕೊಳ್ಳುತ್ತೇನೆ ಎಂದು ವಿಜಯೋತ್ಸವದಲ್ಲಿ ಶಾಸಕ ಸುನೀಲ್ ಕುಮಾರ್ ಆಡಿದ ಮಾತನ್ನು ತೀವ್ರವಾಗಿ ಖಂಡಿಸುತ್ತೇನೆ, ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಶಾಸಕನ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರರಾದ ಶುಭದರಾವ್ ಹೇಳಿದರು.
ಅವರು ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ನಿಮ್ಮ ಮಾತುಗಳು ಹತಾಶೆಯ ಪ್ರತೀಕವಾಗಿದೆ ಬೆದರಿಕೆಗಳಿಗೆ ಹೆದರುವ ಕಾರ್ಯಕರ್ತರು ನಾವಲ್ಲ ನಿಮ್ಮ ಎದುರಿಸುವ ಶಕ್ಕಿ ನಮ್ಮಲಿದೆ ಆದರೆ ಇನ್ನು ಮಾತನಾಡುವಾಗ ಎಚ್ಚರವಿರಲಿ. ಟೈಗರ್ ಗ್ಯಾಂಗಿನ ಹೆಸರಿನಲ್ಲಿ ಮುತಾಲಿಕ್‍ರು ಹಿಂದುಗಳ ಹತ್ಯೆ ಮಾಡಿದ್ದಾರೆ ಎಂಬ ತಮ್ಮ ಹೇಳಿಕೆ ಆಶ್ಚರ್ಯ ತಂದಿದೆ. ದಾಖಲೆ ಇದೆ ಎನ್ನುತ್ತೀರಿ ಅದನ್ನು ಯಾಕೆ ಬಹಿರಂಗಪಡಿಸಿಲ್ಲ, ಹತ್ಯೆ ಬಗ್ಗೆ ಮಾಹಿತಿ ಇದ್ದರೂ ಮೌನ ವಹಿಸಿರುವುದೂ ಅಪರಾದವಲ್ಲವೆ? ಈ ಬಗ್ಗೆ ಶಾಸಕರನ್ನು ಸಾಕ್ಷಿಯಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂದು ಅಗ್ರಹಿಸುತ್ತೇನೆ. ನಿಮ್ಮ ವಿರುದ್ದ ಮಾಡಿದ ಭ್ರಷ್ಟಾಚಾರ ಅರೋಪ ಎಲ್ಲವೂ ಸತ್ಯವಾಗಿದ್ದು ಅದಕ್ಕೆ ಇನ್ನೂ ಬದ್ದವಾಗಿದ್ದೇನೆ ಆದರೆ ಅದಕ್ಕೆ ಉತ್ತರಿಸುವ ಧೈರ್ಯ ನಿಮಗಿಲ್ಲ. ಇನ್ನೂ ನಿಮ್ಮ ಭ್ರಷ್ಟಾಚಾರ ಬಯಲಿಗೆಳೆಯಲು ಭ್ರಷ್ಟಾಚಾರ ವಿರೋಧಿ ಸಮಿತಿಯನ್ನೇ ರಚನೆ ಮಾಡುತ್ತೇವೆ ಅದರಿಂದ ನಿಮ್ಮ ಬಂಡವಾಳ ಎಲ್ಲಾ ಹೊರಬರಲಿದೆ ಎಂದರು.
ನನನ್ನು ಚಿಲ್ಲರೆ ನಾಯಕ ಎಂದಿರಿ ಹೌದು ನಾನು ಚಿಲ್ಲರೆ ನಾಯಕನೇ ಯಾಕೆಂದರೆ ನನ್ನಲಿ ಇರುವುದ ಚಿಲ್ಲರೆ ಹಣ ನಿಮ್ಮ ಹಾಗೆ ಭ್ರಷ್ಟಾಚಾರದಿಂದ ಸಂಪಾದಿಸಿದ ಹಣವೂ ಇಲ್ಲ, ಅಕ್ರಮ ಆಸ್ತಿಯೂ ಇಲ್ಲ, ಯಾರೋ ಕೊಟ್ಟ ಡೈಮಂಡ್ ನೆಕ್ಲೆಸ್ ಇಲ್ಲ, ಈವರೆಗೆ ಯಾವುದೇ ಅರೋಪ ಇಲ್ಲದೆ ಪ್ರಮಾಣಿವಾಗಿ ಸೇವೆ ಮಾಡುತ್ತಾ ಬಂದಿದೇನೆ ಇನ್ನೂ ಮಾಡುತ್ತೇನೆ ಎಂದರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಅಜಿತ್ ಹೆಗ್ಡೆ, ನಗರ ಹಿಂದುಳಿದ ಮುಖಂಡ ಹೇಮಂತ್ ಆಚಾರ್ಯ ಉಪಸ್ಥಿತರಿದ್ದರು.