ಕಾರ್ಕಳ: ಒಳ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲಿನಿಂದ ಹರಿಯುತ್ತಿದ್ದ ಸಮಸ್ಯೆಗೆ ಪರಿಹಾರ
ವಿ4 ವರದಿಗೆ ಸ್ಪಂದಿಸಿದ ಕಾರ್ಕಳ ಪುರಸಭಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ನಾಗರಿಕರು
ಕಾರ್ಕಳ ಗಾಂಧಿ ಮೈದಾನದ ಕ್ರೈಸ್ಟ್ ಕಿಂಗ್ ಚರ್ಚ್ ಮತ್ತು ಶಾಲೆಗಳಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಒಳ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲಿನಿಂದ ಹರಿದು ಎಲ್ಲರಿಗೂ ಸಮಸ್ಯೆಯಾಗುತ್ತಿದ್ದು ಇದೀಗ ಕಾರ್ಕಳ ಪುರಸಭೆಯವರು ಒಳ ಚರಂಡಿಯ ಕಾಮಗಾರಿಕೆಯನ್ನು ಪ್ರಾರಂಭಿಸಿ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ.
ಒಳ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲಿನಿಂದ ಹರಿಯುತ್ತಿದ್ದರಿಂದ ಕಂಗೆಟ್ಟ ಸಮೀಪದ ವಸತಿ ಸಂಕೀರ್ಣದ ನಿವಾಸಿಗಳು ತಮ್ಮ ಮನೆಗಳನ್ನು ಖಾಲಿ ಮಾಡಿ ಬೇರೆ ಕಡೆ ಸ್ಥಳಾಂತರ ಗೊಂಡಿದ್ದರು. ಅದಲ್ಲದೆ ಚರ್ಚಿಗೆ ಬರುವ ಭಕ್ತಾದಿಗಳು ಹಾಗೂ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಪಾದಚಾರಿಗೆಗಳಿಗೆ ಈ ದುರ್ವಾಸನೆಯಿಂದ ತುಂಬಾ ಸಮಸ್ಯೆಯಾಗುತ್ತಿತ್ತು. ಕಳೆದ ಆಗಸ್ಟ್ 14ರಂದು ವಿ4 ಮಾಧ್ಯಮದಲ್ಲಿ ಈ ಸಮಸ್ಯೆ ಬಗ್ಗೆ ಸಮಗ್ರ ವರದಿ ಪ್ರಸಾರವಾಗಿತ್ತು.
ಇದೀಗ ಸ್ಥಳೀಯ ಚುನಾಯಿತ ಪ್ರತಿನಿಧಿಯ ಪ್ರಯತ್ನದಿಂದ ಕಾರ್ಕಳ ಪುರಸಭೆಯವರು ಕೂಡಲೇ ಒಳ ಚರಂಡಿಯ ಕಾಮಗಾರಿಕೆಯನ್ನು ಪ್ರಾರಂಭಿಸಿದ್ದಾರೆ. ಹಳೆಯ ಮಣ್ಣಿನ ಪೈಪ್ಗಳನ್ನು ತೆಗೆದು ದೊಡ್ಡದಾದ ಪ್ಲಾಸ್ಟಿಕ್ ಪೈಪ್ಗಳನ್ನು ಗಳನ್ನು ಅಳವಡಿಸಿ ಎಲ್ಲೂ ತ್ಯಾಜ್ಯ ನೀರು ನಿಲ್ಲದ ಹಾಗೆ ಅಚ್ಚುಕಟ್ಟಾಗಿ ಕಾಮಗಾರಿಕೆಯನ್ನು ನಿರ್ವಹಿಸಿದ್ದಾರೆ. ಸಮಸ್ಯೆಯ ಬಗ್ಗೆ ಸುದ್ದಿ ಪ್ರಕಟಿಸಿದ ವಿ4 ಚಾನಲಿಗೆ ಹಾಗೂ ಸಮಸ್ಯೆಗೆ ಪರಿಹಾರ ದೊರಕಿಸಿಕೊಟ್ಟ ಪುರಸಭೆ ಅಧಿಕಾರಿಗಳಿಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ.