ಕಾರ್ಕಳ: ಬೈಕ್‍ಗೆ ಕಾರು ಢಿಕ್ಕಿ, ಬೈಕ್ ಸವಾರರಿಗೆ ಗಂಭೀರ ಗಾಯ
ಬೈಕ್‍ಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಸಂಕಲ ಕರಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಟೈಲ್ಸ್ ಕೆಲಸ ಮಾಡುವ ಕಾರ್ಮಿಕರಾದ ತೌಶಿಪ್ ಮತ್ತು ತನ್ವೀರ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿನ್ನಿಗೋಳಿ ಕಡೆಯಿಂದ ಮುಂಡ್ಕೂರು ಕಡೆ ಸಾಗುತ್ತಿದ್ದ ಕಾರು ಮುಂಡ್ಕೂರಿನಿಂದ ಸುರತ್ಕಲ್ ಕಡೆ ಸಾಗುತ್ತಿದ್ದ ಬೈಕಿಗೆ ವಿರುದ್ಧ ದಿಕ್ಕಿನಲ್ಲಿ ಡಿಕ್ಕಿಯಾಗಿದೆ.
ಕಾರು ಚಾಲಕ ತಿರುವಿನಲ್ಲಿ ಕಾರನ್ನು ವಿರುದ್ಧ ದಿಕ್ಕಿಗೆ ಚಲಾಯಿಸಿದರ ಪರಿಣಾಮ ಬೈಕಿಗೆ ಡಿಕ್ಕಿಯಾಗಿ ಚರಂಡಿಗೆ ಬಿದ್ದಿದೆ. ಕಾರು ಚಾಲಕನ ಅತಿ ವೇಗ ,ಹಾಗೂ ವಿರುದ್ಧ ದಿಕ್ಕಿಗೆ ಕಾರು ಚಲಾಯಿಸಿದರ ಪರಿಣಾಮ ಅಪಘಾತ ಸಂಭವಿಸಿದೆ. ಕಾರು ಹಾಗೂ ಬೈಕ್ ಮುಂಭಾಗ ನಜ್ಜು ಗುಜ್ಜಾಗಿದೆ. ಕಾರ್ಕಳ ಗ್ರಾಮಾಂತರ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.