ಕಾರ್ಕಳ : ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಚರ್ಚ್‌ನ ವಾರ್ಷಿಕ ಮಹೋತ್ಸವ

ಕಾರ್ಕಳ: ಅತ್ತೂರು ಸಂತ ಲಾರೆನ್ಸರ ಕ್ಷೇತ್ರ ಕಾರ್ಣಿಕ ಕ್ಷೇತ್ರವಾಗಿದೆ ಇದೊಂದು ಪ್ರಾರ್ಥನೆ ಕೇಂದ್ರವಾಗಿದೆ ಈ ಕ್ಷೇತ್ರದಲ್ಲಿ ಸುಮಾರು 300 ವರ್ಷಗಳಿಂದ ಅತ್ತೂರು ಸಂತ ಲಾರೆನ್ಸರ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ದೇಶ ವಿದೇಶಗಳಿಂದ ಲಕ್ಷಾಂತರ ಜನರು ಈ ಪುಣ್ಯಕ್ಷೇತ್ರಕ್ಕೆ ಬಂದು ಪ್ರಾರ್ಥಿಸುತ್ತಾರೆ. ಅವರಿಗೆ ಸಂತ ಲಾರೆನ್ಸರು ಎಲ್ಲವನ್ನು ಕೊಟ್ಟಿರುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ಅಸಾಧ್ಯವಾದುದು ಸಾಧ್ಯವಾಗಿದೆ. ಜಾತಿ ಮತ ಭೇದವಿಲ್ಲದೆ ಎಲ್ಲಾ ವರ್ಗದ ಜನರು ಸಂತ ಲಾರೆನ್ಸ್ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಹೇಳಿದರು.

2024ರ ಸಂತ ಲಾರೆನ್ಸರ ಆರು ದಿನಗಳ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಂತ ಲಾರೆನ್ಸ್ ರ ಪವಿತ್ರ ಬಟ್ಟೆಯ ತುಂಡನ್ನು ಹಾಗೂ ಸಂತ ಲಾರೆನ್ಸ್ ರ ದಿವ್ಯಮೂರ್ತಿಯನ್ನು ಪೂಜಿಸಿ ಭವ್ಯ ಮೆರವಣಿಯ ಮೂಲಕ ತಂದು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಯಿತು. ಉಡುಪಿ ಪ್ರಾಂತ್ಯದ ಶ್ರೇಷ್ಠ ಧರ್ಮಗಳಾದ ಮಾನ್ಸಿ ಫರ್ಡಿನಂಡ ಗೊನ್ಸ್ ವಾಲ್ವಿನ್, ಶ್ರೇಷ್ಠ ವಂದನೀಯ ಸಂತ ಲಾರೆನ್ಸ್ ಕ್ಷೇತ್ರ ಬಸಿಲಕದ ಧರ್ಮ ಗುರುಗಳಾದ ಆಲ್ಬನ್ ಡಿಸೋಜ, ವಂದನೀಯ ಗುರುಗಳಾದ ಲಾರ್ಸಿ ಪಿಂಟೋ, ವಂದನೀಯ ಧರ್ಮಗುರುಗಳಾದ ರೋಮನ್ಮಸ್ಕರಿನೆಸ್, ಕಾರ್ಯದರ್ಶಿ ರೊನಾಲ್ಡ್ ನೋರನ್ಹ ಉಪಸ್ಥಿತರಿದ್ದು ಕ್ಷೇತ್ರದ ಉಪಾಧ್ಯಕ್ಷರಾದ ಸಂತೋಷ್ ಡಿ ಸಿಲ್ವಾ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.