ಸುಳ್ಯ: ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಗೊನೆ ಮುಹೂರ್ತ
ಸುಳ್ಯ ತಾಲೂಕು ಪೆರುವಾಜೆಯ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.30ರಂದು ಜಾತ್ರಾ ಮಹೋತ್ಸವ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗೊನೆ ಮುಹೂರ್ತ ನೆರವೇರಿತು.
ಶ್ರೀ ದೇವರ ವಾರ್ಷಿಕ ಉತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ದಿನಾಂಕ ಜ.30ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ ಮತ್ತು ಶುದ್ದಿ ಕಲಶ ಬೆಳಗ್ಗೆ 10 ಗಂಟೆಯಿಂದ ವಿಷ್ಣುಪ್ರಿಯ ಮಹಿಳಾ ಭಜನಾ ಮಂಡಲಿ ಬೆಳ್ಳಂದೂರು ವಲಯ ಇವರಿಂದ ಭಜನಾ ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ಸಾಯಂಕಲ ಗಂಟೆ 6.30ಕ್ಕೆ ರಂಗ ಪೂಜೆ, ಮಹೋತ್ಸವ, ದರ್ಶನ ಬಳಿ, ಬಟ್ಟಲು ಕಾಣಿಕೆ,, ಮತ್ತು, ಗುಳಿಗ ಪಂಜುರ್ಲಿ ಶಿರಾಡಿದ ದೈವಗಳ ನೇಮ ನಡೆಯಲಿದ್ದು, ಇಂದು ಗೊನೆ ಮುಹೂರ್ತ ಕಾರ್ಯಕ್ರಮ ನೆರವೇರಿತು.
ಗೊನೆ ಮುಹೂರ್ತದ ಈ ಸಂದರ್ಭದಲ್ಲಿ ಎಂ ಕೆ ಬಾಲಚಂದ್ರ ರಾವ್ ಆಡಳಿತ ಮುಕ್ತೇಸರರು, ದಯಾನಂದ ಗೌಡ ಜಾಲು ಅಧ್ಯಕ್ಷರು ಮತ್ತು ಸದಸ್ಯರು, ದೇವಸ್ಥಾನದ ಮುಕ್ತೇಸರರಾದ ದಯಾಕರ ಆಳ್ವ ಬೋಳಕುಮೇರು, ಡಾಕ್ಟರ್ ನರಸಿಂಹ ಶರ್ಮಾ ಕಾನಾವು, ವಸಂತ ಬೈಪಾಡಿತಾಯ ಮುಕ್ಕುರು ಸುರೇಶ ಉಪಾಧ್ಯಾಯ,( ಅರ್ಚಕರು) ಕುಶಾಲಪ್ಪ ಗೌಡ ಪೆರುವಾಜೆ, ಶ್ರೀಮತಿ ಸುಜಾತ ವೀರಾಜ್ ಕಜೆ, ಶ್ರೀಮತಿ ಪುಷ್ಪಾವತಿ ಎಂ ಕಂಡಿಪ್ಪಾಡಿ, ಕೃಷ್ಣಪ್ಪ ನಾಯ್ಕ ದೇವಿ ಮೂಲೆ ಹಾಗೂ ಉಮೇಶ್ ಕೆ ಎಮ್ ಬಿ ಮತ್ತು ಊರಿನ ಹತ್ತು ಸಮಸ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.